ಮಂಜನಾಡಿ: ಡಿ.25ರಂದು ಅಲ್ ಮದೀನಾದಲ್ಲಿ ಸ್ನೇಹ ಸಮ್ಮಿಲನ
ಮಂಜನಾಡಿ, ಡಿ.22: ಅಲ್ ಮದೀನಾ ದರ್ಸ್ , ಶರೀಅತ್ ಕಾಲೇಜು, ಯತೀಮ್ ಖಾನ, ಬೋರ್ಡಿಂಗ್, ಉರ್ದು, ದಅವ ಕಾಲೇಜುಗಳಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳು ಒಂದುಗೂಡುವ ‘ಅಲ್ ಮದೀನಾ ಅಲುಮ್ನಿ’ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಡಿಸೆಂಬರ್ 25ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಅಲ್ ಮದೀನಾ ಆಡಿಟೋರಿಯಂನಲ್ಲಿ ನಡೆಯಲಿದೆ.
ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಜಿ.ಎಮ್.ಮುಹಮ್ಮದ್ ಕಾಮಿಲ್ ಸಖಾಫಿ ವಿಶೇಷ ತರಗತಿ ನಡೆಸಲಿದ್ದಾರೆ. ಝಿಯಾರತ್, ಕತ್ಮುಲ್ ಕುರ್‌ಆನ್, ಕ್ವಿಝ್, ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ ಮದೀನಾ ಮುದರ್ರಿಸರಾದ ಅಬ್ದುಲ್ಲ ಅಹ್ಸನಿ, ಮುಹಮ್ಮದ್ ಕುಂಞಿ ಅಮ್ಜದಿ, ಅಬ್ದುಲ್ ರಝಾಕ್ ಮಾಸ್ಟರ್, ಬಷೀರ್ ಹಿಮಮಿ ಜೋಕಟ್ಟೆ, ಇಕ್ಬಾಲ್ ಮರ್ಝುಖಿ, ಇಮ್ರಾನ್ ಸಾಗರ್ ಸುರತ್ಕಲ್, ಇಮ್ತಿಯಾಝ್ ಸಜಿಪ, ಅಸ್ಗರ್ ಮುಡಿಪ್ಪು, ಅಶ್ರಫ್ ಬಾಳೆಪುನಿ, ನಿಝಾರ್ ಗುರುಪುರ, ಇನ್ನಿತರ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಸಅದಿ ಮೂಡಬಿದಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ