ಉಪ್ಪಿನಂಗಡಿ: ನಗ- ನಗದು ಕಳವು
Update: 2022-12-26 23:05 IST
ಉಪ್ಪಿನಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ನಗ- ನಗದನ್ನು ದೋಚಿ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುರ ಎಂಬಲ್ಲಿ ಸೋಮವಾರ ಬೆಳಕಿಗೆ ಬಂದಿದೆ.
ಇಲ್ಲಿನ ಮೀನಾಕ್ಷಿ ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಹಿಂಬಾಗಿಲ ಮೂಲಕ ಒಳನುಗ್ಗಿರುವ ಕಳ್ಳರು ಮನೆಯ ಕಪಾಟಿನಲ್ಲಿರಿಸಿದ್ದ ಎರಡೂವರೆ ಪವನ್ ಚಿನ್ನದ ಸರ ಹಾಗೂ 32,500 ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಮೀನಾಕ್ಷಿಯವರು ಮಾತ್ರ ಈ ಮನೆಯಲ್ಲಿದ್ದು, ನಿನ್ನೆ ಮಧ್ಯಾಹ್ನ ಗುರುವಾಯನಕೆರೆಯಲ್ಲಿರುವ ತನ್ನ ಮಗಳ ಮನೆಗೆ ತೆರಳಿದ್ದರು. ಸೋಮವಾರ ವಾಪಸ್ ಬಂದ ಇವರು ಮನೆಯ ಮುಂಬಾಗಿಲು ತೆರೆದು ಮನೆಯೊಳಗೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೀನಾಕ್ಷಿಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.