​ಎಸ್ಐಒ ವತಿಯಿಂದ ಸೈಬರ್ ಅಪರಾಧ ತಡೆ ಮತ್ತು ಪೋಕ್ಸೊ ಕುರಿತು ಜಾಗೃತಿ

Update: 2022-12-26 18:34 GMT

ಮಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012, (ಪೋಕ್ಸೊ ಕಾಯಿದೆ 2012) ಮತ್ತು ಸೈಬರ್ ಅಪರಾಧಗಳನ್ನು ತಡೆಯುವ ಬಗ್ಗೆ ಮಂಗಳೂರು ನಗರ ಎಸ್ಐಒ ಘಟಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪೋಕ್ಸೊ 2012 ಕಾಯಿದೆ ಎಲ್ಲಾ ಬಗೆಯ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕಾಯಿದೆಯಾಗಿದೆ. ಇಂದಿನ ಸಮಾಜವು ಪ್ರತಿಯೊಂದು ವಿಷಯದಲ್ಲೂ ತಂತ್ರಜ್ಞಾನವು, ಸಾಮಾಜಿಕ ಜಾಲತಾಣಗಳ ಮೂಲಕ  ಹೊಸ ಅವತಾರಗಳು ಮತ್ತು ಅಪರಾಧಗಳಿಗೆ ಜನ್ಮ ನೀಡಿದೆ. ಸುಲಭವಾಗಿ ಪ್ರವೇಶಿಸಬಹುದಾದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರಗಳನ್ನು ಹೊಂದಿರಬಹುದು, ಆದರೆ, ನಮಗೆ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ಅಗಣಿತ ಅಪಾಯಗಳನ್ನು ಪರಿಚಯಿಸಿವೆ, ಎಸ್ಐಒ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕವು ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಮತ್ತು ಸೈಬರ್ ಅಪರಾಧಗಳು ಹೆಚ್ಚುತ್ತಿರುವುದನ್ನು ಗಮನಿಸಿ ಜಾಗೃತಿ ಅಭಿಯಾನವನ್ನು ಆರಂಭಿಸಿತು.

ಎಸ್ಐಒ ಮಂಗಳೂರು ಘಟಕವು (ಸೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್) (IO ದಕ್ಷಿಣ ಕನ್ನಡ (ಗರ್ಲ್, ಇಸ್ಲಾಮಿಕ್ ಆರ್ಗನೈಸೇಶನ್ ) ಸಹಯೋಗದೊಂದಿಗೆ ಸೈಬರ್ -ಕ್ರೈಂ  ಮತ್ತು ಪೋಕ್ಸೊ ಕಾಯಿದೆ 2012 ಕುರಿತು ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿತು. ಜಿಲ್ಲಾದ್ಯಂತ 30 ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳನ್ನು ಗುರಿಯಾಗಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾನೂನು, ಅಪಾಪ್ತರ ನಡುವಿನ ಸಂಬಂಧದ ಅಪಾಯಗಳು, ಅಪರಾಧ ಮತ್ತು ಪರಿಹಾರ, ಜೊತೆಗೆ ಸೈಬರ್ ಕ್ರೈಮ್ ಮತ್ತು ಸೈಬರ್ ಭದ್ರತೆಯ ವಿವಿಧ ಬಗೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು, ಕೌಟುಂಬಿಕ ಸಂಬಂಧಗಳ ಪ್ರಾಮುಖ್ಯತೆ, ಗುರಿಯನ್ನು ಹೊಂದುವ ಅಗತ್ಯತೆ ಮತ್ತು ಅದನ್ನು ಸಾಧಿಸುವಲ್ಲಿ ಸ್ಥಿರತೆಯ ಬಗ್ಗೆಯೂ ಅವರಿಗೆ ಸಲಹೆ ನೀಡಲಾಯಿತು.

2022ರ ಆಗಸ್ಟ್ 16ರಂದು ಮಂಗಳೂರಿನ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಅಭಿಯಾನದ ಉದ್ಘಾಟನೆ ನಡೆಯಿತು. ಅನಂತ್ ಪ್ರಭು (ಕರ್ನಾಟಕ ನ್ಯಾಯಾಂಗ ಅಕಾಡಮಿಯಲ್ಲಿ ಸೈಬರ್ ಲಾ ಮತ್ತು ಭದ್ರತಾ ತರಬೇತು ದಾರರು; ಹಾಗೆಯೇ, ಡಿಜಿಟಲ್ ಫೋರೆನ್ಸಿಕ್ ಮತ್ತು ಸೈಬರ್ ಸೆಕ್ಯುರಿಟಿ ಸಿಇಒ ಸಹ್ಯಾದ್ರಿ ಕಾಲೇಜಿನ ಪ್ರಧಾನ ತನಿಖಾಧಿಕಾರಿ), ಮುಖ್ಯ ಅತಿಥಿಗಳಾಗಿದ್ದರು ಮತ್ತು ರೆನ್ನಿ ಡಿಸೋಜಾ, ಸಬೀಹಾ ಫಾತಿಮಾ (ಉಪ ಸಂಪಾದಕರು, ಅನುಪಮಾ ಮಹಿಳಾ ಮಾಸಿಕ), ಹರ್ಷಿತ (ಸಮಾಲೋಚಕರು),ಶಹಜಾದ್‌ ಶಕೀಬ್‌ ಮುಲ್ಲಾ (ರಾಜ್ಯಾಧ್ಯಕ್ಷರು, ಎಸ್.ಐ.ಓ. ಕರ್ನಾಟಕ) ಮೊದಲಾದ  ಗಣ್ಯರು ಉಪಸ್ಥಿತರಿದ್ದರು.

Similar News