ಇನ್ನೊಂದು ವರ್ಷದೊಳಗೆ 3 ಹೊಸ ಮಾರ್ಗದಲ್ಲಿ ಓಡಲಿದೆ ಮೆಟ್ರೊ ರೈಲು

Update: 2022-12-29 13:09 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.29: ಇನ್ನೊಂದು ವರ್ಷದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಮೂರು ಮಾರ್ಗಗಳನ್ನು ನಮ್ಮ ಮೆಟ್ರೋ ರೈಲು ಸೇವೆಗೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‍ನ ಗೋವಿಂದರಾಜು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡನೆ ಹಂತದ ಯೋಜನೆಯು ಮರ ತೆರವು, ಭೂಸ್ವಾಧೀನ, ಕೋವಿಡ್ ಹಾವಳಿ ಸೇರಿದಂತೆ ಹಲವು ಕಾರಣಗಳಿಂದ ತುಸು ಅಡಚಣೆಯಾಗಿದೆ.

ಆದಾಗ್ಯೂ ನಿಗದಿಗಿಂತ ಒಂದು ವಷ ಮುಂಚಿತವಾಗಿ ಅಂದರೆ 2025ರ ಬದಲಿಗೆ 2024ರ ಗಡುವು ನೀಡಲಾಗಿದೆ.2023ರ ಡಿಸೆಂಬರ್ ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗವು ವಾಣಿಜ್ಯ ಸಂಚಾರ ಸೇವೆಗೆ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.

Similar News