×
Ad

ಸೈಕಲ್‌ ನಲ್ಲಿ ಶ್ರೀನಗರದಿಂದ ಕನ್ಯಾಕುಮಾರಿಗೆ ಯಾತ್ರೆ: 64 ವರ್ಷದ ಕಮಲೇಶ್ ರಾಣಾ ಮಂಗಳೂರಿಗೆ ಆಗಮನ

Update: 2022-12-29 23:06 IST

ಮಂಗಳೂರು: ಹರಿಯಾಣದ ಸೈಕಲ್  ಸವಾರೆ (ಸೈಕ್ಲಿಷ್ಟ್ ) ಕಮಲೇಶ್ ರಾಣಾ (64) ಸೈಕಲ್ ಮೂಲಕ ದೇಶ ಸುತ್ತಲೂ ಹೊರಟ ಅವರು ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದಾಗ ಸಂಭವಿಸಿದ ಅಪಘಾತದಲ್ಲಿ ಕೈಗೆ ಗಾಯವಾಗಿದ್ದರೂ ತನ್ನ ಗುರಿಯಿಂದ ಹಿಂದೆ ಸರಿಯಲಾರೆ ಎಂದು ತಿಳಿಸಿದ್ದಾರೆ. 

ಮಂಗಳೂರಿನ ಪತ್ರಿಕಾ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದ ಗೋಷ್ಠಿಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಮಾಸ್ಟರ್ಸ್ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಅನೇಕ  ಚಿನ್ನದ ಪದಕ ವಿಜೇತೆ ಕಮಲೇಶ್ ರಾಣಾ ಅವರು  ಶ್ರೀನಗರದಿಂದ ಕನ್ಯಾಕುಮಾರಿಗೆ  ಸೈಕಲ್ ನಲ್ಲಿ ಹೊರಟಿದ್ದರು.  ಡಿಸೆಂಬರ್ 22 ರಂದು ನಾನು ಮಂಗಳೂರು ತಲುಪಿದ ಸಂದರ್ಭದಲ್ಲಿ  (ಕುಳಾಯಿ ಬಳಿ ಬಸ್   ಅವರ ಸೈಕಲ್ ಗೆ ಢಿಕ್ಕಿ ಹೊಡೆಯಿತು.  ಇದರಿಂದ ಅವರ ಕೈ ಮುರಿಯಿತು.  ಕೈಗೆ ಬಲವಾದ ಏಟು ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪತ್ರ ಕರ್ತ ನಂದಗೋಪಾಲ್ ಮತ್ತು ಸುಚಿತ ನಂದಗೋಪಾಲ್ ದಂಪತಿಯ   ಪರಿಚಯ ವಾಗಿ ಅವರ ಆತಿಥ್ಯ ದೊಂದಿಗೆ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.  ಕೈಯಲ್ಲಿ ಸುತ್ತಿದ ಬ್ಯಾಂಡೇಜ್ ನೊಂದಿಗೆ ತಮ್ಮ ಪ್ರಯಾಣ ಮುಂದುವರಿಸುವ ಉತ್ಸುಕತೆಯನ್ನು  ಅವರು ವ್ಯಕ್ತ ಪಡಿಸುತ್ತಾರೆ ಎಂದು ಹೇಳಲಾಗಿದೆ. 

ಸೈಕಲ್ ತುಳಿದು ಮಧುಮೇಹದಿಂದ ದೂರ ಇರಿ: "ಸೈಕಲ್ ತುಳಿಯುವುದರಿಂದ ಮತ್ತು ನಿರಂತರ ವ್ಯಾಯಾಮ ,ಯೋಗ ಮಾಡುವುದರಿಂದ ಮಧುಮೇಹ ದಿಂದ(ಡಯಾಬಿಟಿಸ್) ದೂರ ಇರಬಹುದು. ಇದು ನನ್ನ ಅನುಭವವಾಗಿದ್ದು,  ಈ ಅನುಭವವನ್ನು ದೇಶದ ಜನತೆಯೊಂದಿಗೆ ಹಂಚಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ. ಅದಕ್ಕಾಗಿ ನಾನು ಮಧುಮೇಹ ಕಾಯಿಲೆಗೆ ತುತ್ತಾಗಿದ್ದು,  ಸೈಕಲ್ ತುಳಿಯಲು ಆರಂಭಿಸಿ ದ ನಂತರ ಈ ಕಾಯಿಲೆ ಯಿಂದ ಮುಕ್ತ ಳಾಗಿದ್ದೇನೆ ಎಂದು ಕಮಲೇಶ್ ರಾಣಾ ತಿಳಿಸಿದರು. 

ಭಾರತ ವನ್ನು ಮೇಲಿಂದ ಕೆಳಗಿನವರೆಗೆ ಸೈಕಲ್ ಮೂಲಕ ಸುತ್ತ ಬೇಕು ಎನ್ನುವ ಆಸೆಯಿಂದ ಸೆ.26 ರಿಂದ ನಾನು ಶ್ರೀನಗರದ ದಿಂದ ಕನ್ಯಾಕುಮಾರಿ ಗೆ ಸೈಕಲ್ ಯಾತ್ರೆ ಆರಂಭಿಸಿದ್ದೇನೆ.  ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಶಾಮ್ಲಿಯ ( ಸಹ-ಸೈಕ್ಲಿಸ್ಟಿಕ್ ) ವಿಕಾಸ್ ಜೈ ಜಾನಿಯಾ (28 ವರ್ಷ)  (ದಿಲ್ಲಿ  ಮೂಲದ ಸ್ವಯಂ ಸೇವಾ ಸಂಸ್ಥೆ ಮಂಜಿಲ್ನಲ್ಲಿ ಪೂರ್ಣ ಸಮಯದ ಸ್ವಯಂಸೇವಕ.) ನನಗೆ ಪರಿಚಯವಾಯಿತು. ಆತನೂ ಹವಾಮಾನ ಬದಲಾವಣೆ, ತಾಪಮಾನ ಏರಿಕೆಗೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಲು ಶ್ರೀ ನಗರದಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಹೊರಟಿದ್ದಾರೆ  ಎಂದೂ ತಿಳಿಸಿದರು. 

ಕಮೇಲೇಶ್ ರಾಣಾ ಅವರಿಗೆ ಇಬ್ಬರು ಮಕ್ಕಳು. ಮಗಳು ಸ್ನಾತಕೋತ್ತರ ಪದವಿ ಓದುತ್ತಿದ್ದಾಳೆ( ಎಲ್ ಎಲ್ ಎಂ ).ಮಗ ಪದವಿ ವ್ಯಾಸಂಗ ಮಾಡುತ್ತಿದ್ದಾನೆ.ಈ ನಡುವೆ ಸೈಕಲ್ ಮೂಲಕ ದೇಶ ಸುತ್ತುವ ಆ ಮೂಲಕ ದೈಹಿಕ ಕ್ಷಮತೆಯ ಸಂದೇಶ ನೀಡಲು ಹೊರಟ ಏಕಾಂಗಿ ಮಹಿಳೆ ರಾಣಾ ಅವರ ಪಯಣದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಆಕೆ,  ಸಮಸ್ತ ಭಾರತದ ಜನ ನನ್ನೊಂದಿಗೆ ಇದ್ದಾರೆ ಎನ್ನುತ್ತಾರೆ.

ದಿನವೊಂದಕ್ಕೆ ಸುಮಾರು 130ರಿಂದ 140 ಕಿ.ಮೀ ಸೈಕಲ್ ನಲ್ಲಿ ತಮ್ಮ ಬಟ್ಟೆ ಬರೆ,ಮಿತ ಆಹಾರ ದೊಂದಿಗೆ ಪಯಣಿಸುತ್ತಾರೆ. ಅಪಘಾತದ ಕಾರಣದಿಂದಾಗಿ ಶ್ರೀ ನಗರದಿಂದ ಕನ್ಯಾಕುಮಾರಿ ವರೆಗೆ  ಕ್ರಮಿಸುವ ವ ಗುರಿಯಿಂದ ತಾನು ವಿಚಲಿಳಾಗಿಲ್ಲ ಎಂದು ಕಮಲೇಶ್ ರಾಣಾ ಸ್ಪಷ್ಟಪಡಿಸಿದ್ದಾರೆ.

ಭಾರತದ ಹರಿಯಾಣದ ರೋಹ್ಟಕ್ ನಿಂದ 2006 ರಿಂದ ರಾಷ್ಟ್ರೀಯ  ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ಗಳಲ್ಲಿ ಹಲವು ಚಿನ್ನದ ಪದಕ ವಿಜೇತೆ. 2010 ರಲ್ಲಿ 1500 ಮೀಟರ್ ಓಟದಲ್ಲಿ ಮಲೇಶಿಯಾದಲ್ಲಿ ನಡೆದ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯ ನ್ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದರು.ಈ ಸಾಧನೆಗೆ ಸರಕಾರದಿಂದ ಯಾವುದೇ ಪ್ರೋತ್ಸಾಹ ದೊರೆತಿಲ್ಲ ಎನ್ನುವ ಕೊರಗು ಕಮಲೇಶ್ ರಾಣಾ ರಲ್ಲಿದೆ.2010 ನಲ್ಲಿ ಕ್ಯಾಲಿಫೋರ್ನಿ ಯಾದಲ್ಲಿ ವಿಶ್ವ ಮಾಸ್ಟರ್ಸ್ ಚಾಂಪಿಯನ್ ಶಿಪ್ ಗೆ  ಆಯ್ಕೆಯಾಗಿದ್ದರು.

ವಿಕಾಸ್ ಜೈ ಜಾನಿಯಾ ಮಾಧ್ಯಮ ಸಂವಾದ ಗೋಷ್ಠಿಯಲ್ಲಿ  ಉಪಸ್ಥಿತರಿದ್ದರು.

Similar News