ಕೊಣಾಜೆ: ದೈಹಿಕವಾಗಿ ಸದೃಢರಾದರೆ ಮಾತ್ರ ಮಾನಸಿಕ ನೆಮ್ಮದಿಯೂ ಸಿಗುತ್ತದೆ ; ಚಂದ್ರಹಾಸ್ ಶೆಟ್ಟಿ

Update: 2023-01-01 14:22 GMT

ಕೊಣಾಜೆ: ಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ  ವಾರ್ಷಿಕ ಕ್ರೀಡಾಕೂಟ 'ಕ್ರೀಡಾ ಸಂಭ್ರಮ ' ಶನಿವಾರ‌ ನಡೆಯಿತು. 

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜಸೇವಕರಾದ ಲಯನ್ ಚಂದ್ರಹಾಸ್ ಶೆಟ್ಟಿ ಅವರು,  ಒಬ್ಬ ವ್ಯಕ್ತಿ ತನ್ನ ಆಸೆಗಳನ್ನು ಪೂರೈಸಲು ದೈಹಿಕ ಅರೋಗ್ಯ ಮುಖ್ಯ. ಮಾತ್ರವಲ್ಲದೇ ದೈಹಿಕ ಅರೋಗ್ಯ ವಾಗಿದ್ದರೆ ಮಾನಸಿಕ ನೆಮ್ಮದಿಯೂ ಲಭಿಸುತ್ತದೆ. ದೈಹಿಕ ಅರೋಗ್ಯ ವನ್ನು ಹಣ ಕೊಟ್ಟು ಸಂಪಾದನೆ ಮಾಡಲು ಅಸಾಧ್ಯ.  ಪ್ರತೀ ನಿತ್ಯ ನಾವುಗಳು ಮಾಡುವ ವ್ಯಾಯಾಮಗಳು, ಯೋಗ ಪ್ರಾಣಾಯಾಮ, ದೈಹಿಕ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಕಡೆಂಜ ಸೋಮಶೇಖರ್ ಚೌಟ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಬಹುಮಾನ ಗಳನ್ನು ಪಡೆದ ಕ್ರೀಡಾಪಟುಗಳನ್ನು, ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಗಳನ್ನು, ಜಿಲ್ಲಾ ಮಟ್ಟದ ಆತ್ಲೆಟಿಕ್ಸ್ ಸ್ಪರ್ಧೆ ಯಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳನ್ನು,ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳನ್ನು, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರನ್ನು, ಜಿಲ್ಲಾ ಮಟ್ಟದ  ತೃತೀಯ ಸೋಪಾನ ಪರೀಕ್ಷೆ ಯಲ್ಲಿ ಪಾಸಾಗಿರುವ ಹೆಮ್ಮೆಯ ಗೈಡ್ಸ್ ವಿದ್ಯಾರ್ಥಿಗಳನ್ನು, ವಿಶ್ವ ಸಾಂಸ್ಕೃತಿಕ ಜಾ0ಬುರಿಯಲ್ಲಿ ಯಲ್ಲಿ ಭಾಗವಹಿಸಿದ ಹೆಮ್ಮೆಯ ಸ್ಕೌಟ್ಸ್ ಗೈಡ್ಸ್ ಗಳನ್ನು ಸನ್ಮಾನಿಸಲಾಯಿತು.

ಪ್ರೌಢಶಾಲ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾಲತಾ ಸರ್ವರನ್ನು ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ರಾಧಾಕೃಷ್ಣ ರೈ ಧನ್ಯವಾದವಿತ್ತರು.  ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

ಶಾಲಾ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ ನಡೆಯಿತು. 

Similar News