ಎಂಟು ತಿಂಗಳಲ್ಲಿ ಕುರ್ ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿಗೆ ಸನ್ಮಾನ

Update: 2023-01-03 12:46 GMT

ಮಂಗಳೂರು: ನಗರದ ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಅಧೀನದಲ್ಲಿರುವ ಅಶೈಖ್  ಅಸ್ಸೆಯ್ಯಿದ್ ಜಲಾಲ್ ಮಸ್ತಾನ್ ಮುಹಮ್ಮದ್ ಮೌಲಾ ಹಿಫ್ಳುಲ್ ಕುರ್ ಆನ್ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಫಿಳ್ ಮುಹಮ್ಮದ್ ಶಹೀಂ ಅವರನ್ನು ಝಿನತ್ ಬಕ್ಷ್ ವತಿಯಿಂದ ಸನ್ಮಾನಿಸಲಾಯಿತು.

ಅಡ್ಯಾರ್ ಕಣ್ಣೂರು ಮುಹಮ್ಮದ್ ಸ್ವಾದಿಕ್‌ರ ಪುತ್ರನಾಗಿರುವ ಹಾಫಿಳ್ ಮುಹಮ್ಮದ್ ಶಹೀಂ ಕೇವಲ 8 ತಿಂಗಳಲ್ಲಿ ಸಂಪೂರ್ಣ ಕುರಾನ್ ಹಿಫ್ಳ್ ಕಂಠಪಾಠ ಮಾಡಿದ್ದಾರೆ.

ಕಾಲೇಜಿನ ಪ್ರಾಂಶುಪಾಲ, ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸನ್ಮಾನಿಸಿ ಅಭಿನಂದಿಸಿದರು. ಮಸೀದಿಯ ಖತೀಬ್  ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಸದಸ್ಯರಾದ ಎಸ್.ಎಂ. ರಶೀದ್ ಹಾಜಿ, ಅಬ್ದುಲ್ ಸಮದ್ ಹಾಜಿ, ಅದ್ದು ಹಾಜಿ, ಐ. ಮೊಯ್ದಿನಬ್ಬ ಹಾಜಿ, ಕಾಲೇಜಿನ ಉಪನ್ಯಾಸಕರಾದ ಹಾಫಿಳ್ ಅಝ್ಹರುದ್ದೀನ್ ಅನ್ಸಾರಿ, ಹಾಫಿಳ್ ಮುಹಮ್ಮದ್ ಜುನೈದ್ ಅಝ್ಹರಿ, ಅಡ್ಯಾರ್ ಕಣ್ಣೂರು ಬದ್ರಿಯಾ ಜುಮಾ ಮಸೀದಿಯ ಖತೀಬ್  ಅಲ್ಹಾಜ್ ಅನ್ಸಾರ್ ಫೈಝಿ ಬುರ್ಹಾನಿ, ದ.ಕ ಜಿಲ್ಲಾ ಮದ್ರಸಾ ಮ್ಯಾನೇಜ್ಮೆಂಟ್‌ನ ವರ್ಕಿಂಗ್ ಕಾರ್ಯದರ್ಶಿ ಹಮೀದ್ ಕಣ್ಣೂರು,  ದ.ಕ. ಮದ್ರಸ ಮ್ಯಾನೇಜ್ಮೆಂಟ್ ಸದಸ್ಯರಾದ ಅಬ್ದುಲ್ ಹಮೀದ್, ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ರಿಯಾಝುದ್ದೀನ್, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಫಕೀರಬ್ಬ ಮಾಸ್ಟರ್, ಸೈಯದ್ ಸ್ವಾಲಿಹ್ ತಂಙಳ್ ಮತ್ತಿತರರು ಉಪಸ್ಥಿತರಿದ್ದರು.

Similar News