ತುಂಬೆ : ದಿವೀಶ್ ಫ್ರೀ ಪ್ರೈಮರಿ ಸ್ಕೂಲ್ ವಾರ್ಷಿಕೋತ್ಸವ
Update: 2023-01-06 19:42 IST
ಬಂಟ್ವಾಳ: ಗುಲಾಬಿ ಶೆಟ್ಟಿ ಎಜುಕೇಷನಲ್ ಮತ್ತು ಸರ್ವೀಸ್ ಟ್ರಸ್ಟ್” ದಿವೀಶ್ ಫ್ರೀ ಪ್ರೈಮರಿ ಸ್ಕೂಲ್ ತುಂಬೆ ಇದರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಪೆಲ್ಬಿ ಸಂಸ್ಥೆಯ ಸಮನ್ವಯಧಿಕಾರಿ ಪ್ರದೀಪ್ ಪೈ, ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯ ಜೊತೆಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಶಿಕ್ಷಣದ ಜೊತೆಯಲ್ಲಿ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಗುಣಗಳನ್ನು ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಟ್ರಸ್ಟಿ ಸುಕನ್ಯಾ ಎನ್ ಶೆಟ್ಟಿ, ಶಾಲಾ ಸಂಚಾಲಕಿ ಉಷಾಪ್ರಕಾಶ್ ಶೆಟ್ಟಿ, ಶಾಲಾ ಹಾಗೂ ಶಿಕ್ಷಕಿಯರಾದ ಸ್ವಾತಿಶ್ರೀ, ಉಷಾ, ರುಬೀನಾ ಉಪಸ್ಥಿತರಿದ್ದರು.