ಮಂಗಳೂರು: ಕಿನ್ಯದಲ್ಲಿ ಸ್ವಚ್ಛ ಗ್ರಾಮ ಅಭಿಯಾನ
Update: 2023-01-08 19:02 IST
ಮಂಗಳೂರು: ಕಿನ್ಯ ಗ್ರಾಮದ ಪಾಲಡಿಯಿಂದ ವಾದಿತ್ವಇಬ ರಸ್ತೆಯ ಬದಿಯ ತ್ಯಾಜಗಳನ್ನು ವಾದಿತ್ವಇಬ ಕ್ಯಾಂಪಸ್ ವಾಫಿ ವಿದ್ಯಾರ್ಥಿಗಳು ಸಂಘ ಸಂಸ್ಥೆಯ ಸದಸ್ಯರ ಹಾಗೂ ಕಿನ್ಯ ಗ್ರಾಪಂ ಸಹಕಾರದಲ್ಲಿ ತೆರವುಗೊಳಿಸುವ ಮೂಲಕ ಪರಿಸರ ಸ್ವಚ್ಛಗೊಳಿಸಿದರು.
ಗ್ರಾಪಂ ಪಿಡಿಒ ವಿಶ್ವನಾಥ್, ಗ್ರಾಪಂ ಸದಸ್ಯರಾದ ಫಾರೂಕ್ ಕಿನ್ಯ, ಫಯಾಝ್ ಶ್ರಮದಾನಕ್ಕೆ ನೇತೃತ್ವ ನೀಡಿದ್ದರು.
ವಾದಿತ್ವಇಬ ಪ್ರಾಂಶುಪಾಲ ಅಹ್ಮದ್ ಅಮೀನ್ ವಾಫಿ, ಶಿಕ್ಷಕ ಮುಹಮ್ಮದ್ ಸಾಲಿಹ್ ವಾಫಿ ಮತ್ತಿತರರು ಉಪಸ್ಥಿತರಿದ್ದರು.