×
Ad

ಸ್ಯಾಂಟ್ರೋ ರವಿಗೆ ಸಹಕಾರ ಆರೋಪ: ಬೆಂಗಳೂರಿನಲ್ಲಿ ಇನ್‌ಸ್ಪೆಕ್ಟರ್ ಅಮಾನತು

Update: 2023-01-10 18:30 IST

ಬೆಂಗಳೂರು, ಜ.10: ಸ್ಯಾಂಟ್ರೋ ರವಿ ಪರವಾಗಿ ಇಬ್ಬರು ಮಹಿಳೆಯರ ವಿರುದ್ಧ ಸುಳ್ಳು ದೂರನ್ನು ದಾಖಲು ಮಾಡಿ ಜೈಲು ಸೇರುವಂತೆ ಮಾಡಲು ಸಹಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ  ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಈ ಕುರಿತು, ವರದಿಗಳು ಬಂದ ತಕ್ಷಣವೇ, ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ನಿರ್ದೇಶಿಸಿದ್ದರು.

ಮೈಸೂರು ವಿಜಯನಗರ ಠಾಣೆಗೆ ಜ. 2ರಂದು ದೂರು ನೀಡಿದ್ದ ಸಂತ್ರಸ್ತೆ, ‘ನನ್ನ ಹಾಗೂ ನನ್ನ ಸಹೋದರಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣ್, ನಮ್ಮಿಬ್ಬರನ್ನು ಬಂಧಿಸಿದ್ದರು. ಕೆ.ಎಸ್. ಮಂಜುನಾಥ್ ಅಣತಿಯಂತೆ ಕೆಲಸ ಮಾಡಿದ್ದ ಪ್ರವೀಣ್, ನಾವಿಬ್ಬರೂ ಘಟನಾ ಸ್ಥಳದಲ್ಲಿ ಇಲ್ಲದಿದ್ದರೂ ಸುಳ್ಳು ಪಾತ್ರ ಹಾಗೂ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದರು’ ಎಂದು ಪೊಲೀಸರ ಎದುರು ಆರೋಪಿಸಿದ್ದರು.

Similar News