×
Ad

ಮಂಗಳೂರು: ಪೌರಸಂಸ್ಥೆಗಳ ಹಂಗಾಮಿ ನೌಕರರ ಖಾಯಂ ವಿಚಾರ ಸರಕಾರ ಪರಿಶೀಲನೆ

Update: 2023-01-10 22:27 IST

ಮಂಗಳೂರು: ರಾಜ್ಯದ 312 ಪೌರಸಂಸ್ಥೆಗಳ 25 ಸಾವಿರಕ್ಕೂ ಹೆಚ್ಚಿನ ಹಂಗಾಮಿ ನೌಕರರನ್ನು  ಖಾಯಂ ಮಾಡುವ ವಿಚಾರ   ಸರಕಾರದ  ಪರಿಶೀಲನೆಯಲ್ಲಿರುವ ಹಾಗೂ ಖಾಯಂ ಮಾಡಲು ಸಾಧ್ಯವಾಗದಿರುವ ನೌಕರರಿಗೆ ನೇರ ನಗದು ಪಾವತಿ ವ್ಯವಸ್ಥೆ ವ್ಯಾಪ್ತಿಗೆ ತರಲು ಸರಕಾರ ಈಗಾಗಲೇ ಕಾರ್ಯೋನ್ಮುಖವಾಗಿರುವ  ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿಯವರು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 986 ಕ್ಕೆ ಉತ್ತರಿಸಿರುವ ಮಾನ್ಯ ಪೌರಾಡಳಿತ ಸಚಿವರು,ರಾಜ್ಯದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಲ್ಲಿ ಹೊರಗುತ್ತಿಗೆ  ಹಾಗೂ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬುರಾಜು ಸಹಾಯಕರು/ಹೆಲ್ಪರ್/ವಾಲ್ವಮನ್‌ಗಳನ್ನು ವಿಶೇಷ ನೇಮಕಾತಿಯಡಿ ಪರಿಗಣಿಸುವ ಬಗ್ಗೆ ಹಾಗೂ ಖಾಯಂ ಮಾಡಲು ಸಾಧ್ಯವಾಗದಿರುವ ನೌಕರರಿಗೆ ನೇರ ನಗದು ಪಾವತಿ ವ್ಯವಸ್ಥೆ ವ್ಯಾಪ್ತಿಗೆ ತರವುದಾಗಿ ಲಿಖಿತ ಉತ್ತರ ನೀಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News