×
Ad

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ನಿಂದ "ಲೀಡರ್ಸ್ ಮೀಟ್"

Update: 2023-01-11 22:58 IST

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಕರಾವಳಿ ಜಿಲ್ಲೆಗಳ ವತಿಯಿಂದ "ಲೀಡರ್ಸ್ ಮೀಟ್"  ಕಾರ್ಯಕ್ರಮವು ಬಿ ಸಿ ರೋಡ್ ಸಮೀಪದ ಸಾಗರ್ ಆಡಿಟೋರಿಯಂನಲ್ಲಿ   ರಾಜ್ಯಾಧ್ಯಕ್ಷರಾದ ಹಝ್ರತ್ ಡಾ ಮುಹಮ್ಮದ್ ಪಾಝಿಲ್ ರಝ್ವಿ ಕಾವಲ್ ಕಟ್ಟೆ ಯವರ ಅಧ್ಯಕ್ಷ ತೆಯಲ್ಲಿ ನಡೆಯಿತು.

ಸುನ್ನಿ ಜಂಇಯ್ಯತುಲ್ ಉಲಮಾ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕೆ ಪಿ ಹುಸೈನ್ ಸ ಅದಿ ಕೆ ಸಿ ರೋಡ್ ಉದ್ಘಾಟನಾ ಭಾಷಣದಲ್ಲಿ ಆಧ್ಯಾತ್ಮಿಕತೆಯನ್ನು  ಮೈಗೂಡಿಸಿಕೊಳ್ಳುವಂತೆ ನಾಯಕರಿಗೆ ಕರೆ ನೀಡಿದರು.

ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಸುನ್ನೀ ಸಂಘಟನೆಗಳ ನೂತನ ವ್ಯವಸ್ಥೆ, ಕಾರ್ಯಕ್ಷೇತ್ರದ ಬಗ್ಗೆ ವಿವರಿಸಿದರು.

ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜಪೆ ಘಟಕಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮ ದಲ್ಲಿ  ಮುಸ್ಲಿಂ ರಾಜ್ಯ ನಾಯಕರಾದ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ, ಎಮ್ಮೆಸ್ಸೆಂ ಝೈನೀ ಕಾಮಿಲ್ , ಜಿ ಎಂ ಕಾಮಿಲ್ ಸಖಾಫಿ, ತೋಕೆ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ,ಕೆಕೆಎಂ ಕಾಮಿಲ್ ಸಖಾಫಿ, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ರಾಜ್ಯ ಕಾರ್ಯದರ್ಶಿ ಯೂಸುಫ್ ಹಾಜಿ ಉಪ್ಪಳ್ಳಿ ಸದಸ್ಯರಾದ ನೇಜಾರ್ ಅಬೂಬಕ್ಕರ್ ಅಬೂಬಕ್ಕರ್ ಹಾಜಿ, ಅಶ್ರಫ್ ಕಿನಾರ ಮಂಗಳೂರು,ಉಡುಪಿ ಜಿಲ್ಲಾಧ್ಯಕ್ಷ ರಫೀಕ್ ಬಿ ಎಸ್ ಎಫ್  ಹಾಗೂ ವಿವಿಧ ಜಿಲ್ಲೆ ,ತಾಲೂಕು, ಬ್ಲಾಕ್ ಹಾಗೂ ಗ್ರಾಮ ಸಮಿತಿಗಳ  ನಾಯಕರು ಭಾಗವಹಿಸಿದ್ದರು. 

ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬೂಸುಫ್ ಯಾನ್ ಮದನಿ ಸ್ವಾಗತಿಸಿ,  ಕಾರ್ಯದರ್ಶಿ ಎಂಬಿಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು  ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾರ್ಯದರ್ಶಿ ಸುಬ್ ಹಾನ್ ಹೊನ್ನಾಳ ವಂದಿಸಿದರು.

Similar News