×
Ad

ಬಿಜೆಪಿಗೆ ಸಲ್ಲಿಸಿದ 'ಸೇವೆ'ಯ ಕೃತಜ್ಞಾರ್ಥ ಸ್ಯಾಂಟ್ರೋ ರವಿಗೆ ಬಂಧನದಿಂದ ರಕ್ಷಣೆ: ಗುಂಡೂರಾವ್ ಆರೋಪ

Update: 2023-01-12 11:54 IST

ಬೆಂಗಳೂರು, ಜ.12: ಸ್ಯಾಂಟ್ರೋ ರವಿ ವಿರುದ್ಧ FIR ದಾಖಲಾಗಿ ಹತ್ತು ದಿನಗಳಾಗಿವೆ. ಇಷ್ಟಾದರೂ ಸ್ಯಾಂಟ್ರೋ ರವಿಯ ಬಂಧನವಾಗಿಲ್ಲ. ಸ್ಯಾಂಟ್ರೋ ರವಿ BJP ಕಾರ್ಯಕರ್ತ ಎನ್ನುವ ಕಾರಣಕ್ಕೆ ಆತನ ಬಂಧನವಾಗುತ್ತಿಲ್ಲವೇ ಅಥವಾ ಕೆಲ BJPಯವರಿಗೆ ಅವನು ಸಲ್ಲಿಸಿದ 'ಸೇವೆ'ಯ ಕೃತಜ್ಞಾರ್ಥವಾಗಿ ಬಂಧನದಿಂದ ಆತನ ರಕ್ಷಣೆ ಮಾಡಲಾಗುತ್ತಿದೆಯೇ.? ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರಶ್ನಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, 'ನಾನು BJP ಕಾರ್ಯಕರ್ತ' ಎಂದು ಸ್ಯಾಂಟ್ರೋ ರವಿಯೇ ಹೇಳಿಕೊಂಡಿದ್ದಾನೆ. ಇಂತಹ ತಲೆಹಿಡುಕರು BJPಯಲ್ಲಿ ಮಾತ್ರ ಇರಲು ಸಾಧ್ಯ. ಯಾಕೆಂದರೆ BJPಯೇ ಕಳ್ಳ ಖದೀಮರ ಸಂತೆ. ಲಂಪಟರು, ನುಂಗುಬಾಕರು, ಲಂಚ-ಮಂಚ ಪ್ರಹಸನ ಶೂರರಿಂದ BJP ತುಂಬಿ ತುಳುಕುತ್ತಿದೆ. ಇಂತಹ ಭಂಡ BJPಯವರಿಗೆ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಮಾತಾಡಲು ಯಾವ ನೈತಿಕತೆಯಿದೆ.? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಯಾಂಟ್ರೋ ರವಿಯಂತಹ ಪಿಂಪ್‌ BJP ಕಾರ್ಯಕರ್ತ. ಮತ್ತೊಂದು ಕಡೆ‌ ನಟೋರಿಯಸ್ ರೌಡಿ‌ ಶೀಟರ್‌ಗಳನ್ನು, ಪೋಲಿ‌ ಪುಡಾರಿಗಳನ್ನು BJPಯವರೇ, ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಇಂತಹ BJPಯವರು ನೈತಿಕತೆಯ ಬಗ್ಗೆ‌ ನೀತಿ ಪಾಠ ಮಾಡುವುದು ದೆವ್ವದ ಬಾಯಲ್ಲಿ ಸುಪ್ರಭಾತ ಕೇಳಿದಂತೆ. BJPಗೆ ಜನ 'ಬ್ಲ್ಯೂ'ಜೆಪಿ ಎನ್ನುವುದು ಇದೇ ಕಾರಣಕ್ಕಾಗಿಯೇ? ಎಂದು ವ್ಯಂಗ್ಯವಾಡಿದ್ದಾರೆ.

ಸ್ಯಾಂಟ್ರೋ ರವಿ ವಿರುದ್ಧ FIR ದಾಖಲಾಗಿ ಹತ್ತು ದಿನಗಳಾಗಿವೆ. ಇಷ್ಟಾದರೂ ಸ್ಯಾಂಟ್ರೋ ರವಿಯ ಬಂಧನವಾಗಿಲ್ಲ. ಸ್ಯಾಂಟ್ರೋ ರವಿ BJP ಕಾರ್ಯಕರ್ತ ಎನ್ನುವ ಕಾರಣಕ್ಕೆ ಆತನ ಬಂಧನವಾಗುತ್ತಿಲ್ಲವೇ ಅಥವಾ ಕೆಲ BJPಯವರಿಗೆ ಅವನು ಸಲ್ಲಿಸಿದ 'ಸೇವೆ'ಯ ಕೃತಾಜ್ಞಾರ್ಥವಾಗಿ ಬಂಧನದಿಂದ ಆತನ ರಕ್ಷಣೆ ಮಾಡಲಾಗುತ್ತಿದೆಯೇ.? ಸ್ಯಾಂಟ್ರೋ ರವಿ ಬಂಧನ ಯಾವಾಗ.? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಬೆಳೆ ಉಳಿಸಿಕೊಳ್ಳಲು ನಾಯಿಗೆ ಹುಲಿ ವೇಷ ಹಾಕಿದ ರೈತ

Similar News