×
Ad

ಬೆಂಗಳೂರು | ಮೆಟ್ರೊ ಸುರಂಗ ಕೊರೆಯುವಾಗ ರಸ್ತೆ ಕುಸಿತ: ಬೈಕ್ ಸವಾರನಿಗೆ ಗಾಯ, ವಾಹನ ಸಂಚಾರ ನಿರ್ಬಂಧ

Update: 2023-01-12 15:54 IST

ಬೆಂಗಳೂರು: ಮೆಟ್ರೊ ಸುರಂಗ ಕೊರೆಯುವಾಗ ನಗರದ ಜಾನ್ಸನ್ ಮಾರ್ಕೆಟ್ ರಸ್ತೆಯಲ್ಲಿ ಏಕಾಏಕಿ ನಡುರಸ್ತೆ ಮಧ್ಯೆ ವೃತ್ತಾಕಾರದ ಗುಂಡಿ ಬಾಯ್ತೆರೆದಿದ್ದು, ಅದೃಷ್ಟವಶಾತ್ ಆಗಬೇಕಿದ್ದ ಅನಾಹುತ ತಪ್ಪಿದಂತಾಗಿದೆ‌.

ಇಲ್ಲಿನ ರಸ್ತೆಯಲ್ಲಿ ಇಂದು ಏಕಾಏಕಿ ಸುಮಾರು ಎರಡು ಅಡಿ ಆಳದ ರಸ್ತೆ ಗುಂಡಿ ತೆರೆದಿದ್ದು ಇದೇ ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರ ಬಿದ್ದು ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಹಿನ್ನೆಲೆ ಪೂರ್ವ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ‌. ಏಕಾಏಕಿ ರಸ್ತೆ ಗುಂಡಿ ಉದ್ಬವಿಸಿದ್ದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. 

ಆಡುಗೋಡಿಯಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ‌. ಸುರಂಗ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ರಸ್ತೆ ಮದ್ಯಭಾಗದಲ್ಲಿ ಮಣ್ಣು ಸಡಿಲವಾಗಿದೆ  ಎಂದು ಹೇಳಲಾಗುತ್ತಿದೆ. ಸದ್ಯ ಟ್ರಾಫಿಕ್ ಪೊಲೀಸರು ರಸ್ತೆಯ ಎರಡು ಭಾಗಗಳ ವಾಹನ ಸಂಚಾರ ನಿರ್ಬಂಧಿಸಿದ್ದಾರೆ.

Similar News