ಆಝಾದ್ ಪಕ್ಷದಿಂದ ಹೆಚ್ಚೆಚ್ಚು ಜನರು ಕಾಂಗ್ರೆಸ್ ಗೆ ಮರಳುತ್ತಿದ್ದಾರೆ: ಜೈರಾಮ್ ರಮೇಶ್

Update: 2023-01-16 15:41 GMT

ಹೊಸದಿಲ್ಲಿ, ಜ. 16: ಗುಲಾಮ್ ನಬಿ ಆಝಾದ್(Ghulam Nabi Azad) ರ ಡೆಮಾಕ್ರಟಿಕ್ ಆಝಾದ್ ಪಾರ್ಟಿ (DAP)ಯಿಂದ ಹೆಚ್ಚಿನ ನಾಯಕರು ಮಂಗಳವಾರ ಕಾಂಗ್ರೆಸ್ ಗೆ ಮರಳಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್(Jairam Ramesh) ಸೋಮವಾರ ಹೇಳಿದರು.

ಈ ತಿಂಗಳಲ್ಲಿ, ಡಿಎಪಿಯ ಜಮ್ಮು ಮತ್ತು ಕಾಶ್ಮೀರದ 17 ನಾಯಕರು ಪಕ್ಷವನ್ನು ತೊರೆದು ಕಾಂಗ್ರೆಸ್ ತೆಕ್ಕೆಗೆ ಮರಳಿದ್ದಾರೆ. ಕಾಂಗ್ರೆಸ್ ಗೆ ಮರಳಿದವರಲ್ಲಿ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್ ಮತ್ತು ಪೀರ್ಝಾದ ಮುಹಮ್ಮದ್ ಸಯೀದ್ ಸೇರಿದ್ದಾರೆ.

ಪಕ್ಷಕ್ಕೆ ಮರಳಿರುವ ನಾಯಕರನ್ನು ಕಾಂಗ್ರೆಸ್ ಸ್ವಾಗತಿಸಿದೆ. ‘‘ಅವರು ಎರಡು ತಿಂಗಳ ರಜೆಯಲ್ಲಿ ಹೋಗಿದ್ದರು’’ ಎಂದು ಅದು ಹೇಳಿದೆ.

‘‘ನಾಳೆ ಡಿಎಪಿ- ಡಿಸಪ್ಪಿಯಿರಿಂಗ್ ಆಝಾದ್ ಪಾರ್ಟಿಯ ಇನ್ನಷ್ಟು ನಾಯಕರು ತಮ್ಮ ರಜೆಯನ್ನು ಮುಗಿಸಿ ತಾವು ಎಲ್ಲಿಗೆ ಸೇರಬೇಕೋ ಅಲ್ಲಿಗೆ ಮರಳುತ್ತಾರೆ. ಜಮ್ಮುವಿನಿಂದ ಬರುವ ಸುದ್ದಿಯನ್ನು ನಿರೀಕ್ಷಿಸಿ. ಅಲ್ಲಿ ಭಾರತ ಜೋಡೋ ಯಾತ್ರೆಯನ್ನು ಜನವರಿ 19ರಂದು ಸ್ವಾಗತಿಸಲು ಎಲ್ಲರೂ ಸಿದ್ಧರಾಗಿದ್ದಾರೆ’’ ಎಂಬುದಾಗಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

Similar News