ಸುಳ್ಯ: ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಲು ಒತ್ತಾಯಿಸಿ ಏಕಾಂಗಿ ಧರಣಿ

Update: 2023-01-17 16:48 GMT

ಸುಳ್ಯ: ತಾಲೂಕಿನಲ್ಲಿ ಅನಧಿಕೃತ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಮರಳು ಗುತ್ತಿಗೆದಾರರ ಸಂಘದ ಒಕ್ಕೂಟದ ಸದಸ್ಯ ಅನಿಲ್ ಕುಮಾರ್ ಕೆ.ಸಿ. ಏಕಾಂಗಿಯಾಗಿ ಮಂಗಳವಾರ ಧರಣಿ ನಡೆಸಿದರು.

ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಬ್ಯಾನರ್ ಅಳವಡಿಸಿ ಅನಿಲ್ ಕುಮಾರ್ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಪಯಸ್ವಿನಿ ನದಿಯಲ್ಲಿ ಮರಳು ಬ್ಲಾಕ್‍ಗಳನ್ನು ಗುರುತಿಸಿ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಬೇಕು ಅಥವಾ ಸಾಂಪ್ರದಾಯಿಕ ರೀತಿಯಲ್ಲಿ ಗ್ರಾಮ ಪಂಚಾಯಿತಿಗೆ ವಹಿಸಿ ಕೊಟ್ಟು ಅವರು ಮರಳು ತೆಗೆಯಲು ಪರವಾನಗಿ ನೀಡುವ ವ್ಯವಸ್ಥೆ ಆಗಬೇಕು ಮತ್ತು ಸುಳ್ಯ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುವ ಅನಧಿಕೃತ ಮರಳುಗಾರಿಕೆ ನಿಲ್ಲಿಸಬೇಕು ಎಂದು ಅನಿಲ್ ಕುಮಾರ್ ಸಚಿವರುಗಳಿಗೆ ಮನವಿ ಸಲ್ಲಿಸಿದ್ದರು. ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಅನಿಲ್ ಕುಮಾರ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಬೇಡಿಕೆಯನ್ನು ಮುಂದಿರಿಸಿ ಮರಳು ಗುತ್ತಿಗೆದಾರರ ಸಂಘದ ಒಕ್ಕೂಟದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು. ಇದೀಗ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿಲ್ ಕುಮಾರ್ ಒಬ್ಬರೇ ಬೆಳಿಗ್ಗಿನಿಂದ ಮೌನ ಪ್ರತಿಭಟನೆ ನಡೆಸಿದರು.

Similar News