ಬೆಂಜನಪದವು: ಜೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ

Update: 2023-01-17 17:16 GMT

ಬಂಟ್ವಾಳ: ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜು ಇದರ ಜೂನಿಯರ್ ರೆಡ್ ಕ್ರಾಸ್ ಘಟಕ  ಮಂಗಳವಾರ ಉದ್ಘಾಟನೆಗೊಂಡಿತು. 

ಘಟಕವನ್ನು ಉದ್ಘಾಟಿಸಿದ  ಕಾಲೇಜು ಪ್ರಾಚಾರ್ಯೆ ಕವಿತ ಮಾತನಾಡಿ ಮಾನವೀಯತೆಯೇ ರೆಡ್ ಕ್ರಾಸ್ ಸಂಸ್ಥೆಯ ಮೂಲ ಧ್ಯೇಯವಾಗಿದ್ದು ಅದರಂತೆ ಜೀವಿಸಲು ನಾವು ಬದ್ಧರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ  ಸಂಘದ ಅಧ್ಯಕ್ಷ ಹಾಗೂ ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ  ವಾಮನ ಆಚಾರ್ಯ ಮಾತನಾಡಿ, ಅಂತರಾಷ್ಟ್ರೀಯ ಸಂಸ್ಥೆಯಾದ  ರೆಡ್ ಕ್ರಾಸ್ ನಿಂದ ವಿದ್ಯಾರ್ಥಿಗಳು ತರಬೇತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಥಮ ಚಿಕಿತ್ಸೆಯ ಬಗ್ಗೆ ಬೆಂಜನಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ  ಡಾ. ಅನ್ಸಿಲ್ಲಾ ಪತ್ರಾವೊ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಅಶ್ರಫ್ ಬೆಂಜನಪದವು, ಉಪನ್ಯಾಸಕರು ಗಳಾದ ರವಿಚಂದ್ರ ಮಯ್ಯ, ಮೇದಪ್ಪ ಜಿ ಆರ್, ಬಾಲಕೃಷ್ಣ ಎನ್ ವಿ. ಬಾಗವಹಿಸಿದ್ದರು. 

ಉಪನ್ಯಸಕಿಯರಾದ ಆಶಾ, ಸಂದ್ಯಾ ಟಿ, ಜೂನಿಯರ್ ರೆಡ್ ಕ್ರಾಸ್ ವಿದ್ಯಾರ್ಥಿ ಪ್ರತಿನಿಧಿ ಗೌತಮ್ ಉಪಸ್ಥಿತರಿದ್ದರು. 

ರೆಡ್ ಕ್ರಾಸ್ ಸಂಸ್ಥೆ ಸಂಯೋಜನಾಧಿಕಾರಿ ನೂರ್ ಮುಹಮ್ಮದ್ ಸ್ವಾಗತಿಸಿ, ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಚಂದ್ರಶೇಖರ ಎಂ. ವಂದಿಸಿದರು.

Similar News