ದೇಶೀಯ ಕ್ರಿಕೆಟ್‌ಗೆ ಅನ್ಯಾಯ, ನಿಂದನೆ: ಸರ್ಫರಾಝ್ ಖಾನ್ ನಿರ್ಲಕ್ಷ್ಯಕ್ಕಾಗಿ ಬಿಸಿಸಿಐಗೆ ವೆಂಕಟೇಶ್ ಪ್ರಸಾದ್ ತರಾಟೆ

Update: 2023-01-18 14:32 GMT

ಹೊಸದಿಲ್ಲಿ: ಭರ್ಜರಿ ಫಾರ್ಮ್ ನಲ್ಲಿರುವ  ಸರ್ಫರಾಝ್ ಖಾನ್ Sarfaraz Khan ಅವರನ್ನು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದಿಂದ ಹೊರಗಿಟ್ಟಿರುವುದು 'ಅನ್ಯಾಯ' ಎಂದು ಕರೆದಿರುವ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು  ‘ದೇಶೀಯ ರನ್ ಯಂತ್ರ’ ಖಾನ್ ರನ್ನು ನಿರ್ಲಕ್ಷಿಸಿದ್ದಕ್ಕಾಗಿ ಬಿಸಿಸಿಐ ಹಾಗೂ  ರಾಷ್ಟ್ರೀಯ ಆಯ್ಕೆಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

25 ವರ್ಷ ವಯಸ್ಸಿನ ಸರ್ಫರಾಝ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಗರಿಷ್ಠ ರನ್ ಗಳಿಸಿದ್ದಾರೆ.  ಕೇವಲ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ 3,500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಸರ್ಫರಾಝ್  ಅವರನ್ನು ಹೊರಗಿಟ್ಟಿರುವುದು ದೇಶೀಯ ಕ್ರಿಕೆಟ್‌ಗೆ ಮಾಡಿರುವ  ನಿಂದನೆ ಎಂದೂ ಪ್ರಸಾದ್ ಬಣ್ಣಿಸಿದ್ದಾರೆ.

"ಮೂರು ದೇಶೀಯ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಟೆಸ್ಟ್ ತಂಡದಲ್ಲಿ ಆಯ್ಕೆ ಮಾಡದಿರುವುದು ಸರ್ಫರಾಝ್ ಖಾನ್‌ಗೆ ಮಾಡಿರುವ  ಅನ್ಯಾಯವಾಗಿದೆ, ಇದು ದೇಶೀಯ ಕ್ರಿಕೆಟ್‌ಗೆ ನಿಂದನೆಯಾಗಿದೆ. ಸರ್ಫರಾಝ್ ಗಿಂತ ಹೆಚ್ಚು ತೂಕವಿರುವ ಅನೇಕರು ಭಾರತ ತಂಡದಲ್ಲಿದ್ದಾರೆ" ಎಂದು ಸರ್ಫರಾಝ್ ರಣಜಿಯಲ್ಲಿ ಮತ್ತೊಂದು ಶತಕ ಗಳಿಸಿದ ನಂತರ ಟೀಮ್ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಮಂಗಳವಾರ, ರಣಜಿ 'ಬಿ' ಗುಂಪಿನ  ಪಂದ್ಯದಲ್ಲಿ ದಿಲ್ಲಿ ವಿರುದ್ಧ ಸರ್ಫರಾಝ್ 125 ರನ್ (155 ಎಸೆತಗಳಲ್ಲಿ) ಗಳಿಸಿದರು, ಇದು ಖಾನ್ ಸಿಡಿಸಿದ  13 ನೇ ಪ್ರಥಮ ದರ್ಜೆ ಶತಕವಾಗಿದೆ.

ಕಳೆದ ಎರಡು ರಣಜಿ ಟ್ರೋಫಿ ಋತುಗಳಲ್ಲಿ ಖಾನ್ ಅವರು ಕೇವಲ 12 ಪಂದ್ಯಗಳಲ್ಲಿ 136.42 ಸರಾಸರಿಯಲ್ಲಿ  1,910 ರನ್ ಗಳಿಸಿದ್ದಾರೆ. ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ಹಾಗೂ  ಆಸ್ಟ್ರೇಲಿಯಾ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿವೆ.

ಇದನ್ನೂ ಓದಿ: ಆಸ್ಟ್ರೇಲಿಯವನ್ನು ಹಿಂದಿಕ್ಕಿ 2 ಗಂಟೆ ಕಾಲ ನಂ.1 ಟೆಸ್ಟ್ ಸ್ಥಾನದಲ್ಲಿದ್ದ ಭಾರತ: ಕಾರಣವೇನು ಗೊತ್ತೇ?

Similar News