ಹಳೆ ಎಲೆಕ್ಟ್ರಾನಿಕ್ ಸ್ಕ್ರ್ಯಾಪ್ ಸಂಗ್ರಹಕ್ಕೆ ಲಯನ್ಸ್ ಕ್ಲಬ್ ಅಸ್ತು: ಕೊಣಾಜೆಯಲ್ಲಿ ಚಾಲನೆ

Update: 2023-01-19 17:29 GMT

ಕೊಣಾಜೆ: ಲಯನ್ಸ್ ಕ್ಲಬ್ ತೆಗೆದುಕೊಂಡಿರುವ ಪರಿಣಾಮಕಾರಿ ಹೆಜ್ಜೆಯಾಗಿರುವ ಇಲೆಕ್ಟ್ರಾನಿಕ್ ಸೊತ್ತುಗಳ ಸಂಗ್ರಹ ಕಾರ್ಯಕ್ಕೆ, ಉಳ್ಳಾಲ ತಾಲೂಕಿನಲ್ಲಿ ಕೊಣಾಜೆಯಲ್ಲಿ ಚಾಲನೆ ನೀಡಲಾಯಿತು.

ಶಾಸಕ ಯು.ಟಿ ಖಾದರ್ ಅವರಿಂದ  ಹಳೆಯ ಕಂಪ್ಯೂಟರನ್ನು ಲಯನ್ ಪ್ರಸಾದ್ ರೈ ಕಲ್ಲಿಮಾರ್ ಪಡೆದುಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಜಿಲ್ಲೆಯಾದ್ಯಂತ 10 ಕೇಂದ್ರಗಳಲ್ಲಿ ಹಳೆ ಇಲೆಕ್ಟ್ರಾನಿಕ್ ಸೊತ್ತುಗಳ ಸಂಗ್ರಹಣಾ ಕೇಂದ್ರವನ್ನು ತೆರೆಯಲಾಗುವುದು. ಮಂಗಳೂರು ಕಮೀಷನರ್ ಕಚೇರಿ, ಸಿಟಿ ಸೆಂಟರ್ ಸೇರಿದಂತೆ ಕೊಣಾಜೆ ವಿಶ್ವವಿದ್ಯಾನಿಲಯ ಆವರಣ, ತಾಲೂಕು ಕಚೇರಿ ಸೇರಿದಂತೆ ವಿವಿದೆಡೆ ಸಂಗ್ರಹ ಆರಂಭಿಸುವ ಯೋಜನೆಗೆ ಕೈ ಹಾಕಿದೆ. ಹಳೆ ಇಲೆಕ್ಟ್ರಾನಿಕ್ ಸೊತ್ತುಗಳು ಪರಿಸರಕ್ಕೆ ಬಹಳಷ್ಟು ಹಾನಿಯುಂಟು ಮಾಡುತ್ತಿದೆ. ಅದನ್ನು ಸಂಗ್ರಹಿಸುವ ವ್ಯಾಪಾರಿಗಳು ಸೂಕ್ತ ರೀತಿಯಲ್ಲಿ ವಿಲೇವಾರಿ ನಡೆಸದ ಪರಿಣಾಮ ಪರಿಸರಕ್ಕೆ ನಅಪಾಯ ರೀತಿಯಲ್ಲಿ  ಮಾಲಿನ್ಯ ಉಂಟಾಗುತ್ತಿದೆ. ಇದರ ಪರಿಹಾರಕ್ಕಾಗಿ ರಾಜ್ಯದಾದ್ಯಂತ ಲಯನ್ಸ್ ಕ್ಲಬ್ಬೊಂದು ತಿಂಗಳ ಅವಧಿಗೆ ಪರೀಕ್ಷಾರ್ಥವಾಗಿ ಸಂಗ್ರಹಣೆ ನಡೆಸಲಿದೆ. ಆನಂತರ ಕಾರ್ಯಕ್ರಮ ಯಶಸ್ವಿಯಾದಲ್ಲಿ ಮೂರು ತಿಂಗಳಿಗೊಮ್ಮೆ ಹಮ್ಮಿಕೊಳ್ಳುವ ಯೋಜನೆಯಿದೆ ಎಂದು ಕಲ್ಲಿಮಾರ್ ತಿಳಿಸಿದರು.

ಶಾಸಕ ಖಾದರ್ ಯೋಜನೆಯನ್ನು ಹಾಗೂ ಕಾರ್ಯಕ್ರಮ ಹಮ್ಮಿಕೊಳ್ಳಲು ಕಾರಣರಾದ ಲಯನ್ಸ್ ಕ್ಲಬ್ ಅನ್ನು ಶ್ಲಾಘಿಸಿದರು.

ಈ ಸಂದರ್ಭ ಮಂಗಳೂರು ವಿ.ವಿ ಕುಲಸಚಿವ ಕಿಶೋರ್ ಕುಮಾರ್, ಕೊಣಾಜೆ ಗ್ರಾ.ಪಂ ಅಧ್ಯಕ್ಷೆ ಚಂಚಲಾಕ್ಷಿ, ಮಾಜಿ ಅಧ್ಯಕ್ಷರುಗಳಾದ ಶೌಕತ್ ಆಲಿ, ಅಚ್ಚುತ್ತ ಗಟ್ಟಿ, ನಝರ್ ಷಾ ಪಟ್ಟೋರಿ ಮುಂತಾದವರು ಭಾಗಿಯಾಗಿದ್ದರು.

Similar News