ಮುಲ್ಕಿ: ಎನ್ನಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Update: 2023-01-20 05:13 GMT

ಮುಲ್ಕಿ: ವಿಜಯ ಕಾಲೇಜು ಮೂಲ್ಕಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಶಾಲೆಯಲ್ಲಿ ಜ.19ರಂದು  ಜರಗಿತು.

ಶಿಬಿರವನ್ನು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕಷ್ಣ ಪುನರೂರು ಉದ್ಘಾಟಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಿಂದ ರಾಷ್ಟ್ರಪ್ರೇಮ, ದೇಶಭಕ್ತಿ ಬೆಳೆಯುತ್ತದೆ. ವೈಜ್ಞಾನಿಕ ಚಿಂತನೆಗಳ ಕುರಿತು ಚರ್ಚಿಸಬಹುದು. ಯುವ ಜನತೆ ದಾರಿ ತಪ್ಪದಂತೆ ಮಾರ್ಗದರ್ಶನ ನೀಡುತ್ತದೆ ಹಾಗೂ ವಿದ್ಯಾರ್ಥಿಗಳು ದೇಶದ ಆರ್ಥಿಕ ಭದ್ರತೆ ಕುರಿತು ವಿಶ್ಲೇಷಣೆ ಮಾಡುವ ಎಲ್ಲಾ ಅವಕಾಶಗಳನ್ನು ಈ ವಿಶೇಷ ಶಿಬಿರ ಕಲ್ಪಿಸುತ್ತದೆ. ಇದನ್ನು ಯುವ ಜನತೆ ಸದ್ಭಳಕ್ಕೆ ಮಾಡಿಕೊಂಡರೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ಶಮಿನಾ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡರೆ ಸಮಾಜವನ್ನು ಪರಿವರ್ತಿಸಬಹುದಾಗಿದೆ. ವಿದ್ಯಾರ್ಥಿಯು ಸಮುದಾಯದಲ್ಲಿ ಬೆರೆತು ಸಮುದಾಯದ ನೋವು ನಲಿವುಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಸಮಾಜ ಸೇವೆ, ವ್ಯಕ್ತಿತ್ವ ವಿಕಸನ ರೂಪಿಸುವುದು ರಾಷ್ಟ್ರೀಯ ಸೇವಾ ಯೋಜನೆ ಮುಖ್ಯ ಉದ್ದೇಶ ಎಂದು ಹೇಳಿದರು.

ಶ್ರಮದಾನದ ಉದ್ಘಾಟನೆಯನ್ನು ಅತಿಕಾರು ಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ  ಮನೋಹರ್ ಕೋಟ್ಯಾನ್ ನೆರವೇರಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮನೋಹರ ಕೋಟ್ಯಾನ್, ಕಿನ್ನಿಗೋಳಿಯ ಭುವನಾಬಿರಾಮ ಉಡುಪ, ಅನಿಲ್ ಕವತಾರ್, ಶಿಮಂತೂರಿ ನ ಕಿಶೋರ್ ಶೆಟ್ಟಿ, ಪುನರೂರು ಸುರೇಶ್ ರಾವ್,  ಪುರಂದರ ಶೆಟ್ಟಿಗಾರ್ ಪ್ರಾಂಶುಪಾಲ ಡಾ. ಶ್ರೀಮಣಿ ಶೆಟ್ಟಿ, ನಾಯಕ ಗಗನ್ ಉಪಸ್ಥಿತರಿದ್ದರು.

ಜಿತೇಂದ್ರ ವಿ. ರಾವ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಗಗನ್ ವಂದಿಸಿದರು. ಕುಮಾರಿ ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು.

Similar News