ಮಂಗಳೂರು: ರೈಲು ಹಳಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ

Update: 2023-01-21 18:10 GMT

ಮಂಗಳೂರು: ಸುರತ್ಕಲ್ ಸಮೀಪದ ಕುಳಾಯಿ ಗ್ರಾಮದ ಕುಳಾಯಿಗುಡ್ಡೆ ರೈಲ್ವೆ ಸೇತುವೆಯಿಂದ ಸುಮಾರು 200 ಮೀಟರ್ ದೂರದ ರೈಲು ಹಳಿಯಲ್ಲಿ ಅಂದಾಜು 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಶವವು ಶುಕ್ರವಾರ ಸಂಜೆ 4ಕ್ಕೆ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಯಾವುದೋ ರೈಲು ಢಿಕ್ಕಿ ಹೊಡೆದ ಪರಿಣಾಮ ಈ ಯುವಕ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಸುಮಾರು 5.6 ಅಡಿ ಎತ್ತರವಿರುವ ಈ ವ್ಯಕ್ತಿಯು ಕಪ್ಪು ಬಣ್ಣದ ನೈಟ್ ಪ್ಯಾಂಟ್, ಹಳದಿ ಬಣ್ಣದ ಉದ್ದ ತೋಳಿನ ಟೀ ಶರ್ಟ್, ಕಪ್ಪು ಬಣ್ಣದ ಜರ್ಕಿನ್ ಧರಿಸಿದ್ದಾರೆ. ವಾರಸುದಾರರು ಅಥವಾ ಸಂಬಂಧಿಕರಿದ್ದರೆ ಸುರತ್ಕಲ್ ಠಾಣೆ (0824-2220540) ಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Similar News