ಉಳ್ಳಾಲ ದರ್ಗಾ: ಜ.24ರಂದು ಮಹಾಸಭೆ ಸದಸ್ಯರ ಅಂತಿಮ ಪಟ್ಟಿ ಪ್ರಕಟ

Update: 2023-01-23 07:21 GMT

ಮಂಗಳೂರು, ಜ.23: ಉಳ್ಳಾಲ ಜುಮಾ ಮಸೀದಿ ಮತ್ತು ಹಝ್ರತ್ ಸೈಯದ್ ಮದನಿ ದರ್ಗಾದ ನೂತನ ಕಾರ್ಯಕಾರಿ ಸಮಿತಿ ರಚನೆಗೆ ಸಂಬಂಧಿಸಿ ಮಹಾಸಭೆ ಸದಸ್ಯರ ಅಂತಿಮ ಪಟ್ಟಿಯನ್ನು ಜ.24ರಂದು ನಗರದ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ದ.ಕ. ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು ಎಂದು ಉಳ್ಳಾಲ ಜುಮಾ ಮಸೀದಿ ಮತ್ತು ಹಝ್ರತ್ ಸೈಯದ್ ಮದನಿ ದರ್ಗಾದ ನೋಂದಣಿ ಅಧಿಕಾರಿಯಾಗಿ ರಾಜ್ಯ ವಕ್ಫ್ ಬೋರ್ಡ್‌ನಿಂದ ನೇಮಿಸಲ್ಪಟ್ಟ ದ.ಕ .ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News