ಗಣರಾಜ್ಯೋತ್ಸವದಂದು ಬಿಎಂಟಿಸಿಯ 'ನಿಮ್ ಬಸ್' ಆ್ಯಪ್ ಪ್ರಾರಂಭ

Update: 2023-01-23 17:38 GMT

ಬೆಂಗಳೂರು, ಜ. 23: ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ‘ನಿಮ್ಮ ಬಸ್’ ಆ್ಯಪ್ ಜ.26ರ ಗಣರಾಜ್ಯೋತ್ಸವ ದಿನದಿಂದ ಪ್ರಾರಂಭವಾಗಲಿದೆ ಎಂದು ನಿಗಮ ತಿಳಿಸಿದೆ.

ನಿಮ್ಮ ಬಸ್ ಅಪ್ಲಿಕೇಶನ್ ಬಳಕೆದಾರರಿಗೆ ನೈಜ ಸಮಯದಲ್ಲಿ ಬಿಎಂಟಿಸಿಯ ಬಸ್‍ಗಳನ್ನು ಟ್ರ್ಯಾಕ್ ಮಾಡಲು ಸಹಾಯಕವಾಗಲಿದೆ. ಇದರಿಂದ ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆಗಳ ಜೊತೆಗೆ ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಗಳನ್ನು ಆ್ಯಪ್ ಮೂಲಕ ಪಡೆಯಬಹುದಾಗಿದೆ.

ಡಿಸೆಂಬರ್ 23 ರಂದು ಈ ಆ್ಯಪ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದ ರಸ್ತೆ ಸಾರಿಗೆ ನಿಗಮವು ಕೆಲ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಮತ್ತು ಅದರ ನಿಖರತೆಯನ್ನು ಸುಧಾರಿಸಲು ಯೋಜನೆಯನ್ನು ಮುಂದೂಡಿತ್ತು.  

ಅಪ್ಲಿಕೇಶನ್‍ಗೆ ಬಳಕೆದಾರರು ನೀಡಿದ ಪ್ರತಿಕ್ರಿಯೆ ಆಧರಿಸಿ ಆ್ಯಪ್ ಅನ್ನು ಉತ್ತಮಗೊಳಿಸಲಾಗುತ್ತದೆ. ಹಲವು ದೋಷಗಳಿಂದ ಕೂಡಿದ್ದರಿಂದ ಆ್ಯಪ್ ಬರಲು ವಿಳಂಬವಾಯಿತು. ‘ನಿಮ್ ಬಸ್' ಬಿಎಂಟಿಸಿಯ ಮೂರನೇ ಅಪ್ಲಿಕೇಶನ್ ಆಗಿದ್ದು, ಅದು ವಿಫಲಗೊಳ್ಳಲು ನಾವು ಬಯಸುವುದಿಲ್ಲ. ಕಳೆದ ಕೆಲವು ವಾರಗಳಿಂದ ಅಪ್ಲಿಕೇಶನ್ ಪರೀಕ್ಷೆಯಲ್ಲಿದೆ. ನಾವು ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕಾಗಿದೆ ಎಂದು ಬಿಎಂಟಿಸಿಯ ಮೂಲಗಳು ತಿಳಿಸಿವೆ.

Similar News