ಕೆ.ಆರ್. ಮಾರ್ಕೆಟ್ ಬಳಿ ಫ್ಲೈ ಓವರ್ ಮೇಲಿಂದ ಹಣ ಎಸೆದ ವ್ಯಕ್ತಿ ಪೊಲೀಸ್ ವಶಕ್ಕೆ
Update: 2023-01-24 17:14 IST
ಬೆಂಗಳೂರು: ಕೆ.ಆರ್. ಮಾರ್ಕೆಟ್ ಬಳಿಯ ಫ್ಲೈ ಓವರ್ ಮೇಲಿಂದ ನೋಟುಗಳನ್ನು ಎಸೆದಿದ್ದ ಆಯಂಕರ್ ಅರುಣ್ ಎಂಬಾತನನ್ನು ಕೆಆರ್ ಮಾರುಕಟ್ಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಟಿ ಮಾರ್ಕೆಟ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರು ಆತನ ನಾಗರಬಾವಿಯಲ್ಲಿರುವ ಜಿ.ಟಿ. ಬಿಸಿನೆಸ್ ಕಚೇರಿಗೆ ಭೇಟಿ ನೀಡಿ ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿ ವಂದೇ ಮಾತರಂ ಸಮಾಜಸೇವಾ ಸಂಘಟನೆ ಸಿಟಿ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ, ಪ್ರಚಾರದ ಹುಚ್ಚಿಗಾಗಿ ಅರುಣ್ ಈ ರೀತಿ ಮಾಡಿದ್ದಾನೆ. ಜನರ ಓಡಾಟ ಜಾಸ್ತಿ ಇರುತ್ತೆಂದು ಮಾರುಕಟ್ಟೆಯಲ್ಲಿ ಹಣ ಎಸೆದಿದ್ದಾನೆ.ಈ ಸಂಬಂಧ ಆರಂಭದಲ್ಲಿ ಸುಮೋಟೋ ಪ್ರಕರಣ ದಾಖಲಿಸಿದ್ದೆವು. ನಂತರ ಕೋರ್ಟ್ ಅನುಮತಿ ಪಡೆದು ಎಫ್‍ಐಆರ್ ದಾಖಲಿಸಿದ್ದೇವೆ ಎಂದರು.