ಬೆಂಗಳೂರು | ದರೋಡೆ ಪ್ರಕರಣ: 57 ಲಕ್ಷ ಮೌಲ್ಯದ ಸ್ಮಾರ್ಟ್ ವಾಚ್ ವಶ, ಇಬ್ಬರು ಆರೋಪಿಗಳ ಬಂಧನ

Update: 2023-01-25 05:34 GMT

ಬೆಂಗಳೂರು, ಜ.24: ವಾಹನ ಅಡ್ಡಗಟ್ಟಿ ವಾಚ್ ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಆರ್ ಆರ್  ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಝಮೀದ್ ಅಹಮದ್ ಅಲಿಯಾಸ್ ಝಮೀರ್(28) ಮತ್ತು ಸೈಯ್ಯದ್ ಶಾಹಿದ್ ಅಲಿಯಾಸ್ ಶಾಹಿದ್(26) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಬಂಧಿತರಿಂದ 57 ಲಕ್ಷ ಮೌಲ್ಯದ 1282 ಸ್ಮಾರ್ಟ್ ವಾಚ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Similar News