ಚಾರ್ಮಾಡಿ: ಆಕಸ್ಮಿಕವಾಗಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Update: 2023-01-25 08:36 GMT

ಬೆಳ್ತಂಗಡಿ, ಜ.25: ಎರಡು ದಿನಗಳ ಹಿಂದೆ ಆಕಸ್ಮಿಕವಾಗಿ ನದಿಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಚಾರ್ಮಾಡಿಯಿಂದ ವರದಿಯಾಗಿದೆ.

ಚಾರ್ಮಾಡಿ ಕೊಳಂಬೆ ಪಾದೆ ಮನೆ ನಿವಾಸಿ ಧರ್ಣಪ್ಪ ಪೂಜಾರಿ(50) ಮೃತಪಟ್ಟವರಾಗಿದ್ದಾರೆ.

ಧರ್ಣಪ್ಪ ಜ.23ರಂದು ಕಕ್ಕಿಂಜೆ ಪೇಟೆಯಿಂದ ಸಾಮಗ್ರಿಗಳನ್ನು ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮನೆಯ ಸಮೀಪದ ನದಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾರೆನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ನೀರಿನಿಂದ ಮೇಲೆತ್ತಿ ಸ್ಥಳೀಯ ಆಸ್ಪತಗೆ ದಾಖಲಿಸಿದ್ದರು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Similar News