ಮುಸ್ಲಿಮ್ ಒಕ್ಕೂಟ ಕಾಪು ಘಟಕ ಅಧ್ಯಕ್ಷರಾಗಿ ನಸೀರ್ ಅಹ್ಮದ್‌

Update: 2023-01-25 10:49 GMT

ಕಾಪು, ಜ.25: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾಪು ತಾಲೂಕು ಘಟಕದ 2023-24ನೇ ಅವಧಿಯ ಅಧ್ಯಕ್ಷರಾಗಿ ನಸೀರ್ ಅಹ್ಮದ್‌ ಆಯ್ಕೆಯಾಗಿದ್ದಾರೆ.

ಕಾಪುವಿನಲ್ಲಿ ಇಂದು ನಡೆದ ಕಾಪು ತಾಲೂಕು ಸಮಿತಿಯ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಉಪಾಧ್ಯಕ್ಷರಾಗಿ ಮುಸ್ತಾಕ್ ಇಬ್ರಾಹೀಂ ಬೆಳಪು, ಕಾರ್ಯದರ್ಶಿಯಾಗಿ ರಿಯಾಝ್ ಅಹ್ಮದ್‌ ನಝೀರ್ ಮುದರಂಗಡಿ, ಜತೆ ಕಾರ್ಯದರ್ಶಿಯಾಗಿ ವೈ.ಎಂ.ಇಲ್ಯಾಸ್ ಕಟಪಾಡಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಆಝಮ್ ಶೇಕ್ ಉಚ್ಚಿಲ ಅವರನ್ನು ಆರಿಸಲಾಯಿತು.

ಬಿ.ಎಂ.ಮೊಯ್ದಿನ್ ಕಟಪಾಡಿ, ಅಬ್ದುರ್ರಝಾಕ್ ಕಟಪಾಡಿ, ಅಮೀರ್ ಹಂಝ ಕಾಪು, ರಮೀಝ್ ಹುಸೈನ್ ಪಡುಬಿದ್ರಿ, ಅಬ್ದುಲ್ ಹಮೀದ್ ಪಡುಬಿದ್ರಿ, ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರ್, ಮುಹಮ್ಮದ್ ಸಾದಿಕ್ ದಿನಾರ್, ಮುಹಮ್ಮದ್ ಸುಲೈಮಾನ್ ಮಲ್ಲಾರ್ ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆಯಾದರು.

ಅಬ್ದುರ್ರಹ್ಮಾನ್ ಚಂದ್ರನಗರ, ಮುಹಮ್ಮದ್ ಅಶ್ಫಾಕ್, ಮೊಹ್ಸಿನ್ ಮಲ್ಲಾರ್, ಎಂ.ಎಸ್.ಅಬ್ಬಾಸ್ ಹಾಜಿ ಕನ್ನಂಗಾರ್, ಅಬೂಬಕರ್ ಪಾದೂರು ಮತ್ತು ಸಿರಾಜ್ ಉಚ್ಚಿಲ ಅವರನ್ನು ತಾಲೂಕು ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಯಿತು.

ಜಿಲ್ಲಾ ಸಮಿತಿಗೆ ಎಂ.ಪಿ.ಮೊಯ್ದಿನಬ್ಬ, ಅಬ್ದುರ್ರಹ್ಮಾನ್ ಕನ್ನಂಗಾರ್ ಅವರನ್ನು ನೇಮಕ ಮಾಡಲಾಯಿತು.

ಅನ್ವರ್ ಅಲಿ ಕಿರಾಅತ್ ಪಠಿಸಿದರು. ಶಬೀಹ್ ಅಹ್ಮದ್ ಕಾಝಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಸಲಾಹುದ್ದಿನ್ ಹೂಡೆ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ರಿಯಾಝ್ ಅಹ್ಮದ್ ನಝೀರ್ ವಂದಿಸಿದರು. ಸಭೆಯಲ್ಲಿ ಕಾರ್ಯದರ್ಶಿ ಇಸ್ಮಾಯೀಲ್ ಹುಸೈನ್ ಕಟಪಾಡಿ, ಸಂಘಟನಾ ಕಾರ್ಯದರ್ಶಿ ಎಸ್.ಕೆ.ಇಕ್ಬಾಲ್ ಉಪಸ್ಥಿತರಿದ್ದರು.

Similar News