'ದಲಿತ ಸಾಹಿತ್ಯದ ತಾತ್ವಿಕತೆ' ಪಾಠವನ್ನು ಕೈ ಬಿಟ್ಟ ಬೆಂಗಳೂರು ವಿವಿ

Update: 2023-01-25 12:17 GMT

ಬೆಂಗಳೂರು, ಜ.25: ಬೆಂಗಳೂರು ವಿಶ್ವವಿದ್ಯಾಲಯದ ಬಿಎ ಐಚ್ಚಿಕ ಪದವಿಯ ಮೂರನೇ ಸೆಮಿಸ್ಟರಿನ ಪತ್ರಿಕೆ-6ರ ಪಠ್ಯಪುಸ್ತಕದಲ್ಲಿರುವ “ದಲಿತ ಸಾಹಿತ್ಯದ ತಾತ್ವಿಕತೆ” ಎಂಬ ಪಾಠವನ್ನು ಪಠ್ಯದಿಂದ ಕೈ ಬಿಡಲಾಗಿದೆ ಎಂದು ಬೆಂಗಳೂರು ವಿವಿ(Bangalore University) ಪ್ರಕಟನೆ ಹೊರಡಿಸಿದೆ. 

“ದಲಿತ ಸಾಹಿತ್ಯದ ತಾತ್ವಿಕತೆ” ಎಂಬ ಲೇಖನದಲ್ಲಿ ಕೆಲವು ಜಾತಿ ಸೂಚಕವಾದ ಆಕ್ಷೇಪಾರ್ಹ ಪದಬಳಕೆ ಇರುವುದರಿಂದ ಹಾಗೂ ಕೆಲವು ಮಾಹಿತಿದೋಷ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಮಾಜದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು ಎಂಬ ಸದುದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದೆ.

ಜ.22ರಂದು ನಡೆದ ಕನ್ನಡ ಸ್ನಾತಕ ಅಧ್ಯಯನ ಮಂಡಳಿಯ ಸಭೆಯಲ್ಲಿ ಹಾಗೂ ಜ.24ರ ಸಿಂಡಿಕೇಟ್ ಸಭೆಯ ನಿರ್ಣಯದಂತೆ ಲೇಖನವನ್ನು ಈ ಕೂಡಲೇ ಪಠ್ಯದಿಂದ ಹಾಗೂ ಪರೀಕ್ಷೆಯಿಂದ ಕೈ ಬಿಡಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಇನ್ನು ಮುಂದೆ ಸಮಾಜದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗದಂತೆ ಪಠ್ಯವನ್ನು ರೂಪಿಸಲು ಅಧ್ಯಯನ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.

Similar News