ಮಲೇಷ್ಯಾದಿಂದ ಕಳ್ಳಸಾಗಣೆ ಮಾಡಿದ 10 ಟನ್ ಗಸಗಸೆ ಬೀಜ ವಶ

Update: 2023-01-30 03:06 GMT

ಬೆಂಗಳೂರು: ಮಲೇಷ್ಯಾದಿಂದ ಬೆಂಗಳೂರಿಗೆ ಪೀಠೋಪಕರಣ ಆಮದು ಮಾಡುತ್ತಿದ್ದ ಶಿಪ್ಪಿಂಗ್ ಕಂಟೈನರ್‌ನಲ್ಲಿ ಕಳ್ಳಸಾಗಾಣಿಕೆ ಮಾಡಿಕೊಂಡು ಬಂದ 1.8 ಕೋಟಿ ರೂಪಾಯಿ ಮೌಲ್ಯದ 10 ಟನ್ ಗಸಗಸೆ ಬೀಜವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ನಗರ ಮೂಲದ ಏಜೆಂಟ್‌ನನ್ನು ಬಂಧಿಸಲಾಗಿದೆ. ಗಸಗಸೆ ಬೀಜವನ್ನು ಕಂದು ಬಣ್ಣದ ಪೊಟ್ಟಣಗಳಲ್ಲಿ ಸುತ್ತಲಾಗಿತ್ತು. ವೈಟ್‌ಫೀಲ್ಡ್‌ನ ಇನ್‌ಲ್ಯಾಂಡ್ ಕಂಟೈನರ್ ಡಿಪೋಗೆ ತಲುಪಿದ ತಕ್ಷಣ ಇದನ್ನು ವಶಪಡಿಸಿಕೊಳ್ಳಲಾಯಿತು. ಮಲೇಷ್ಯಾದಿಂದ ಆಮದು ಮಾಡಿಕೊಂಡಿದ್ದ ಪೀಠೋಪಕರಣಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಘೋಷಿಸಿದ ನೀಲಿ ಬಣ್ಣದ ಕಂಟೈನರ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಕಳೆದ ಬುಧವಾರ ಸ್ಕ್ಯಾನ್ ಮಾಡಿದಾಗ ಕಳ್ಳಸಾಗಾಣಿಕೆ ಮತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಬಲವಾದ ಶಂಕೆಯಿಂದ ತನಿಖಾಧಿಕಾರಿಗಳು ಕಂಟೈನರ್ ತೆರೆದಾಗ ಎದುರಿಗೆ ಕಚೇರಿ ಬಳಕೆಯ ಪೀಠೋಕರಣಗಳು ಕಂಡುಬಂದವು. ಕೆಲ ಪೀಠೋಪಕರಣಗಳನ್ನು ಸರಿಸಿ ನೋಡಿದಾಗ, ಕಂಟೈನರ್‌ನ ಹಿಂಭಾಗದಲ್ಲಿ ಪೊಟ್ಟಣಗಳನ್ನು ರಾಶಿ ಹಾಕಿರುವುದು ಕಂಡುಬಂತು. ಇವುಗಳನ್ನು ಕತ್ತರಿಸಿ ನೋಡಿದಾಗ ಇದು ಗಸಗಸೆ ಎನ್ನುವುದು ಪತ್ತೆಯಾಯಿತು. ಇದನ್ನು ಔಷಧೀಯ ಗುಣಗಳಿಂದಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ.

ಆಮದು ಮಾಡಿಕೊಳ್ಳಲು ಬುಕ್ಕಿಂಗ್ ಮಾಡಿಕೊಂಡಿದ್ದ ಬೆಂಗಳೂರು ಮೂಲದ ಏಜೆಂಟ್ ವಿರುದ್ಧ ಪ್ರಕರಣ ದಾಖಲಿಸಿ, ಮರುದಿನ ಬಂಧಿಸಲಾಗಿದೆ ಹಾಗೂ ಗಸಗಸೆ ಬೀಜವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Similar News