ಮಂಗಳೂರು: ಜೆಡಿಎಸ್ ಕಾರ್ಯಕರ್ತರಿಂದ ನಳಿನ್ ಕುಮಾರ್ ಕಟೀಲ್‌ಗೆ ಕಪ್ಪುಬಾವುಟ ಪ್ರದರ್ಶನ

Update: 2023-01-31 10:59 GMT

ಮಂಗಳೂರು,ಜ.31: ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್‌ಗೆ ದ.ಕ. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ಮಂಗಳವಾರ ನಗರ ಸರ್ಕ್ಯೂಟ್ ಹೌಸ್ ಬಳಿ ಮುತ್ತಿಗೆ ಹಾಕಿ ಕಪ್ಪುಬಾವುಟ ಪ್ರದರ್ಶಿಸಲಾಯಿತು.

ಈ ವೇಳೆ ಮಾತನಾಡಿದ ಅಕ್ಷಿತ್ ಸುವರ್ಣ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿರುವ ದೇವೆಗೌಡರ ಬಗ್ಗೆ ಕೀಳಾಗಿ ಮಾತನಾಡಿರುವ ನಳಿನ್ ವರ್ತನೆ ಖಂಡನೀಯ. ದೇಶದ ಪ್ರಧಾನಿಯಾಗಿ ದೇವೇಗೌಡರು ನೀಡಿರುವ ಕೊಡುಗೆಯನ್ನು ನಳಿನ್ ಮರೆತಿರಬಹುದು. ಆದರೆ ದೇಶದ ಜನರು ಮರೆತಿಲ್ಲ. ದೇವೆಗೌಡರ ಕುಟುಂಬ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿರುವ ನಳಿನ್ ತಕ್ಷಣ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಳಿನ್ ಭಾಗವಹಿಸುವ ಎಲ್ಲಾ ಕಾರ್ಯಕ್ರಮದಲ್ಲೂ ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.

ಪಕ್ಷದ ಮುಖಂಡರಾದ ರತೀಶ್ ಕರ್ಕೇರ, ಮುಹಮ್ಮದ್ ಅಸಿಫ್, ಹಿತೇಶ್ ರೈ, ಸತ್ತಾರ್ ಬಂದರ್, ನಿತೇಶ್ ಪೂಜಾರಿ, ವಿನಯ್, ಗೌತಮ್, ವಿನಿತ್, ರಿನಿತ್, ನಿಶಾಂತ್, ಗಾಣೀಶ್, ಪ್ರದೀಪ್, ಕೀರ್ತಿಕ್, ಪವನ್, ಧನುಷ್, ಸುಶಾಂತ್, ವಿನಯ್, ಜಯದೀಪ್ ಧನುಷ್ ಪೂಜಾರಿ ಪಾಲ್ಗೊಂಡಿದ್ದರು.

Similar News