×
Ad

​ಗಾಂಜಾ ಸೇವನೆ ಆರೋಪ: ನಾಲ್ವರು ಪೊಲೀಸ್ ವಶಕ್ಕೆ

Update: 2023-01-31 23:32 IST

ಕೊಲ್ಲೂರು: ಗಾಂಜಾ ಸೇವನೆಗೆ ಸಂಬಂಧಿಸಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಜ.30ರಂದು ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುದೂರು ಮೈದಾನ ಬಳಿ ರೆನ್ಸ್(28) ಹಾಗೂ ಮುದೂರು ಉದಯನಗರ ಬಳಿ ವಿನೀಶ್ (25) ಮತ್ತು ಜ.24ರಂದು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ ವಿದ್ಯಾರತ್ನ ನಗರದ ಆಸ್ತಾ ಅಬೋಡ್ ಅಪಾರ್ಟ್‌ಮೆಂಟ್ ಬಳಿ ಮೋಹಿತ್ ಖರೆ ಹಾಗೂ ಸಾಕ್ಷಿ ಶ್ರೀಯಾನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Similar News