ಮಂಗಳೂರು: ಮಡಿವಾಳ ಮಾಚಿದೇವ ಜಯಂತಿ ಆಚರಣೆ

Update: 2023-02-01 14:11 GMT

ಮಂಗಳೂರು: ಮಹಾನ್ ತಪಸ್ವಿಗಳಾದ ಮಡಿವಾಳ ಮಾಚಿದೇವರು ಆದರ್ಶ ಸಮಾಜ ಕಟ್ಟುವಲ್ಲಿ ಪರಿಶ್ರಮ ಪಟ್ಟ ವ್ಯಕ್ತಿತ್ವವುಳ್ಳವರಾಗಿದ್ದರು ಎಂದು ಉಪನ್ಯಾಸಕ ಕರುಣಾಕರ ಬಳ್ಕೂರು ಅವರು ಅಭಿಪ್ರಾಯಪಟ್ಟರು. 

ಅವರು ನಗರದ ತುಳು ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ(ರಿ)ದ ಸಹಕಾರದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಉಪನ್ಯಾಸ ನೀಡಿದರು.

ಬಸವಣ್ಣನವರ ಚಿಂತನೆ ಹಾಗೂ ಅವರ ಅನುಭವಕ್ಕೆ ಮರುಳಾಗಿ ಅಂದಿನ ಕಲ್ಯಾಣಕ್ಕೆ ಬಂದವರು, ಧರ್ಮ, ಸಾಹಿತ್ಯ, ಸಮಾಜ ವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. ಸರಳ ಭಾಷೆಯಲ್ಲಿ ವಚನ ರಚನೆಯ ಮೂಲಕ ಅಂದು ಸಮಾಜದಲ್ಲಿ ಬೇರೂರಿದ್ದ ಅನಿಷ್ಠ ಪದ್ಧತಿಗಳು, ಅಸಮಾನತೆಯನ್ನು ಹೋಗಲಾಡಿಸಲು ಯತ್ನಿಸಿದರು. ಅವರ ಆದರ್ಶಗಳು ಸಾರ್ವಕಾಲಿಕ ಪ್ರೇರಣೆಯಾಗಿವೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ(ರಿ)ದ ಅಧ್ಯಕ್ಷರಾದ ವಿಶ್ವನಾಥ ವಿ. ಕಾಟಿಪಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಮಡಿವಾಳರ ಸಂಘದ ಕಾರ್ಯದರ್ಶಿ ಅಶ್ವತ್ಥ ಪೊಳಲಿ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.

Similar News