ಮಂಗಳೂರು: ಶಕ್ತಿ ವಸತಿ ಶಾಲೆಯಲ್ಲಿ ದ.ರಾ.ಬೇಂದ್ರೆ ಜನ್ಮ ದಿನಾಚರಣೆ

Update: 2023-02-01 16:40 GMT

ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಕನ್ನಡದ ವರ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಕನ್ನಡ  ಶಿಕ್ಷಕ   ಶರಣಪ್ಪ ಈ ಸಂದರ್ಭದಲ್ಲಿ ಮಾತನಾಡಿ ‘‘ದ.ರಾ.ಬೇಂದ್ರೆಯವರು ಬರೆದ ಪ್ರತಿಯೊಂದು ಕವನಗಳ ಸಾಲು ಅವರು ಜೀವನದಲ್ಲಿ ಕಂಡ ನೋವು, ಕಷ್ಟಗಳ ಕನ್ನಡಿಯಂತಿವೆ. ಮೂಲ ಭಾಷೆ ಮರಾಠಿ ಆದರೂ ಕನ್ನಡದಲ್ಲಿ ಸಾಹಿತ್ಯ ರಚಿಸಿ ಎರಡನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಧೀಮಂತ ವ್ಯಕ್ತಿ ದ.ರಾ.ಬೇಂದ್ರೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ನಿಲ್ಲುವುದು ಹೇಗೆ ಎಂಬುದನ್ನು ದ.ರಾ.ಬೇಂದ್ರೆ ಅವರಿಂದ ಕಲಿಯಬೇಕಿದೆ’’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೇಂದ್ರೆ ಅವರು ಬರೆದ ಶ್ರಾವಣ ಬಂತು ಕಾಡಿಗೆ ಎಂಬ ಹಾಡನ್ನು ಹಾಡಿದರು.

ಕುಮಾರಿ ಸುಹಾನಿ ದಿನದ ಪ್ರಾಮುಖ್ಯತೆಯ ಕುರಿತಂತೆ ಮಾತನಾಡಿದರು. ಈ ಸಂದರ್ಭದಲ್ಲಿ  ದ.ರಾ.ಬೇಂದ್ರೆ ಕುರಿತಾದ ಒಂದು ಸಾಕ್ಷ್ಯ ಚಿತ್ರವನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು. ಕುಮಾರಿ ಗೇಷ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಶಕ್ತಿ ವಸತಿ  ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Similar News