ಬೆಂಗಳೂರು | ಟ್ರಾಫಿಕ್ ನಲ್ಲಿ ಸಿಲುಕಿದ ಆ್ಯಂಬುಲೆನ್ಸ್: ಮಗು ಮೃತ್ಯು

Update: 2023-02-03 05:57 GMT

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗುವೊಂದು ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗದೇ ಮೃತಪಟ್ಟಿರುವುದು ವರದಿಯಾಗಿದೆ. 

ಹಾಸನದಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ಕರೆತರುತ್ತಿದ್ದ ವೇಳೆ ನೆಲಮಂಗಲದಿಂದ ಗೊರಗುಂಟೆಪಾಳ್ಯದವರೆಗಿನ ಮುಖ್ಯರಸ್ತೆಯಲ್ಲಿ ಗುರುವಾರ ಉಂಟಾಗಿದ್ದ ವಿಪರೀತ‌ ದಟ್ಟಣೆಯಲ್ಲಿ ಆ್ಯಂಬುಲೆನ್ಸ್ ಸಿಲುಕಿತ್ತು ಎನ್ನಲಾಗಿದೆ. ಸೂಕ್ತ ಸಮಯದಲ್ಲಿ‌ ಮಗುವನ್ನು ಆಸ್ಪತ್ರೆಗೆ ದಾಖಲಿಸದಿದ್ದರಿಂದ ಮಗ ಮೃತಪಟ್ಟಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ.

ಗುರುವಾರ ತುಮಕೂರು ಜಿಲ್ಲೆಯ ತಿಪಟೂರಿನ ಕೈಮರಾ ಬಳಿ ಬುಲೆರೋ ವಾಹನ ಹಾಗು ಬೈಕ್ ನಡುವೆ ನಡೆದ ಅಪಘಾತ ಸಂಭವಿಸಿತ್ತು.  ಅಪಘಾತದಲ್ಲಿ ಗಾಯಗೊಂಡ ಮಗುವಿನ ತಂದೆ ಅಹಮದ್​​, ತಾಯಿ ರುಕ್ಸಾನಾಗೆ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನ ಹಿಮ್ಸ್​​ಗೆ ರವಾನಿಸಲಾಗಿತ್ತು. ಬಳಿಕ  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್​ ಸಮಸ್ಯೆ ಎದುರಾಗಿದೆ. 

ಮಗು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮಗುವನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಕಲ್ಪಿಸದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ‌ ಹೊರಹಾಕಿದರು. ತುರ್ತು ಸಂದರ್ಭಗಳಲ್ಲಿ ಪೊಲೀಸರು ಟ್ರಾಫಿಕ್ ಸರಿ ಮಾಡಲು ನೆರವಾಗಲಿ ಎಂದು ಆ್ಯಂಬುಲೆನ್ಸ್​ ಚಾಲಕ ಮನವಿ ಮಾಡಿದ್ದಾರೆ.

Similar News