×
Ad

ಫೆ.6ರಂದು ತಲಪಾಡಿ ಟೋಲ್ ಪ್ಲಾಝಾ ಎದುರು ಧರಣಿ

Update: 2023-02-03 14:53 IST

ಉಳ್ಳಾಲ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೆ.ಸಿ.ರೋಡ್ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ  ಫೆ.6ರ ಬೆಳಗ್ಗೆ 11 ಗಂಟೆಗೆ ತಲಪಾಡಿ ಟೋಲ್ ಪ್ಲಾಝಾ ಕಚೇರಿ ಎದುರು ಧರಣಿ ನಡೆಯಲಿದೆ.

ಟೋಲ್ ಕೇಂದ್ರದಲ್ಲಿ ಆ್ಯಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದು, ತಲಪಾಡಿ ಮತ್ತು ಕೆ.ಸಿ.ರೋಡ್ ನಲ್ಲಿ ಬಸ್ ತಂಗುದಾಣ ನಿರ್ಮಿಸುವುದು, ತಲಪಾಡಿ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಮುಂತಾದ  ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ

Similar News