ಬೆಳ್ತಂಗಡಿ: 25ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Update: 2023-02-03 10:23 GMT

ಬೆಳ್ತಂಗಡಿ: ಉಜಿರೆಯಲ್ಲಿ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧ್ವಜಾರೋಹಣದೊಂದಿಗೆ ಶುಕ್ರವಾರ ಬೆಳಿಗ್ಗೆ ಚಾಲನೆ ದೊರಕಿದೆ.

ದಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡವು ಶ್ರೇಷ್ಠ ಭಾಷೆಯಾಗಿದ್ದು, ಇದನ್ನು ಉಳಿಸಿ, ಬೆಳೆಸಿ, ಪಸರಿಸಿ, ಇದರ ಕಂಪನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಸಮ್ಮೇಳನವು ಸಹಕಾರಿಯಾಗಲಿ. ಪ್ರತಿ ವ್ಯಕ್ತಿಗೂ ಕನ್ನಡದ ಪರಿಚಯವನ್ನು, ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹವನ್ನು ನೀಡುತ್ತಿರುವ ಸಾಹಿತ್ಯ ಸಮ್ಮೇಳನದ ಸಂದೇಶ ಎಲ್ಲೆಡೆ ಹರಡಲಿ" ಎಂದು ಶುಭ ಹಾರೈಸಿದರು.

ಜಿಲ್ಲಾಡಳಿತದಿಂದ ಸಮ್ಮೇಳನಕ್ಕೆ ಬೇಕಾಗುವ ಅಗತ್ಯ ಸಹಕಾರ ನೀಡಲಾಗುವುದು" ಎಂದು ಹೇಳಿದರು.

ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ ಸಮ್ಮೇಳನದ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.

ಸಂಯೋಜನಾ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ. ಹಾಗೂ ಸದಸ್ಯರು ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ವಿವಿಧ ಸಮಿತಿಗಳ ಸಂಚಾಲಕರಾದ ಡಾ.ಬಿ.ಎ.ಕುಮಾರ ಹೆಗ್ಡೆ,ಡಾ.ಭಾಸ್ಕರ್ ಹೆಗಡೆ, ಡಾ. ದಿವಾಕೊಕ್ಕಡ, ಗಂಗಾರಾಣಿ ಜೋಶಿ, ಯತೀಶ್ ಕುಮಾರ್, ಡಾ.ಬಿ.ರಾಜೇಶ್,ಡಾ. ಪ್ರಸನ್ನ ಕುಮಾರ್ ಐತಾಳ್,ಗೋಪಾಲಕೃಷ್ಣ ಕಾಂಚೋಡು,ಹರ್ಷ ಕುಮಾರ್ ಕೆ., ರಾಮಚಂದ್ರ ಶೆಟ್ಟಿ,ಜಗನ್ನಾಥ ಶೆಟ್ಟಿ,ತಂಗಚ್ಚನ್ ಮತ್ತಿತರರು ಉಪಸ್ಥಿತರಿದ್ದರು.

Similar News