ವಿಟ್ಲ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

Update: 2023-02-06 04:47 GMT

ವಿಟ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವುಗೈದ ಘಟನೆ ಕಾನತ್ತಡ್ಕದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ವಿಟ್ಲ ಕಾನತ್ತಡ್ಕ ಶಾಲೆಯ ಸಮೀಪದ ರಹೀಂ ಶಾನ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಸದಸ್ಯರು ರಾತ್ರಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ರಾತ್ರಿ 8ರಿಂದ 11ಗಂಟೆಯ ಒಳಗಾಗಿ ಮನೆ ಕಳವು ನಡೆಸಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಹದಿನೈದು ಪವನ್ ಚಿನ್ನ ಹಾಗೂ 1 ಲಕ್ಷ ನಗದನ್ನು ಕಳವು ಮಾಡಿರುವುದಾಗಿ ಎಂದು ತಿಳಿದುಬಂದಿದೆ. ಮನೆಮಂದಿ ರಾತ್ರಿ 12 ಗಂಟೆಗೆ ಬಂದಾಗ ಹಿಂಬದಿಯ ಬಾಗಿಲು ಮುರಿಯಲಾಗಿದ್ದು, ಕಳವು ನಡೆದ ಬಗ್ಗೆ ಬೆಳಕಿಗೆ ಬಂದಿದೆ.

ವಿಟ್ಲ ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Similar News