ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್ "ಟೀನ್ಸ್ ಪಾಥ್" ವಿಚಾರಗೋಷ್ಠಿ

Update: 2023-02-06 10:39 GMT

ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್ ಮಂಗಳೂರು ಘಟಕದ ಆಶ್ರಯದಲ್ಲಿ "ಟೀನ್ಸ್ ಪಾಥ್" ಎಂಬ ವಿದ್ಯಾರ್ಥಿ ವಿಚಾರಗೋಷ್ಠಿ ಮಂಗಳೂರಿನ ಹಂಪನ್ ಕಟ್ಟೆಯ ಎ.ಎಂ.ಎ ಹೌಸ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಡ್ರಗ್ಸ್‌ನ ವಿರುದ್ಧ ಜಾಗೃತಿ, ಪೋಷಕರೊಂದಿರುವ ಕರ್ತವ್ಯಗಳು, ನಮ್ಮ ಜೀವನದ ಗುರಿ, ಜೀವನದಲ್ಲಿನ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು?. ಆತ್ಮಹತ್ಯೆ ಪರಿಹಾರವಲ್ಲ, ಮಾದರಿ, ವಿದ್ಯಾರ್ಥಿ ಹೇಗಿರಬೇಕು?, ಪ್ರವಾದಿ ಮುಹಮ್ಮದ್ ಜೀವನ ಸಂದೇಶ, ಒಳಿತಿನೆಡೆಗೆ ಆಹ್ವಾನಿಸುವ ಕುರ್‌ಆನ್‌ ಎಂಬಿತ್ಯಾದಿ ವಿಷಯಗಳಲ್ಲಿ ವಿಚಾರ ವಿನಿಮಯ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಬ್ದುಲ್ ರಾಝಿಕ್ ಸೌಧಾಗರ್ ಮುಖ್ಯ ಪ್ರವಚನಕಾರರಾಗಿ ಮಾತನಾಡಿ, ಕುರ್‌ ಆನ್ ಮನುಕುಲದ ಮಾರ್ಗದರ್ಶಿಯಾಗಿದೆ. ಪ್ರತಿಯೊಬ್ಬರು ಇದನ್ನು ಅಧ್ಯಯನ ನಡೆಸಬೇಕಾಗಿದೆ. ಆದರಲ್ಲಿ ಪ್ರತಿಪಾದಿಸಿದ ಮೌಲ್ಯಗಳು ಮಾನವನ ಜೀವನದ ದಿಕ್ಕೂಚಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಳ್ಳಾಲ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಮುಹಮ್ಮದ್ ಮನ್ಸೂರ್‌, ಮಾದಕವಸ್ತುಗಳೆಡೆಗೆ ವಿದ್ಯಾರ್ಥಿಗಳು ಆಕರ್ಷಿತರಾಗದೇ, ಅದರ ದುಷ್ಪರಿಣಾಮದ ಗಂಭೀರತೆಯ ಬಗ್ಗೆ ವಿವರಿಸಿದರು.

ಆಲ್ ಬಯಾನ್ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಮುಹಮ್ಮದ್ ಹಫೀಝ್ ಸ್ವಲಾಹಿ, ನಿಶಾದ್ ಸ್ವಲಾಹಿ, ಯಾಸಿರ್ ಅಲ್ ಹಿಕಮಿ, ನಝೀರ್ ಸಲಫಿ, ಅಸ್ಕರ್ ಇಬ್ರಾಹಿಂ, ರಫೀಕ್ ಮೌಲವಿ ಮುಂತಾದವರು ವಿವಿಧ ವಿಷಯಗಳಲ್ಲಿ ವಿಚಾರ ಮಂಡಿಸಿದರು.

ಕರ್ನಾಟಕ ಸಲಫಿ ಅಸೊಸಿಯೇಷನ್‌ ಇದರ ಅಧ್ಯಕ್ಷ ಫಿರೋಝ್ ಉಳ್ಳಾಲ್, ಅಬ್ದುರ್ರಹ್ಮಾನ್ ಉಳ್ಳಾಲ್, ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

ಆಲ್ ಬಯಾನ್ ಅರಬಿಕ್ ಕಾಲೇಜಿನ ವಿದಾರ್ಥಿ ಹಾಫಿಝ್ ರಾಝಿನ್ ಕುರ್ ‌ಆನ್‌ ಪಠಿಸಿದರು. ಅನೀಸ್ ಮದನಿ ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು. ಸೈಯದ್ ಶಾಝ್ ಸ್ವಾಗತಿಸಿ, ಕಲಾಂ ಪೆರ್ಲ ಧನ್ಯವಾದಗೈದರು. ಇಜಾಝ್ ಸ್ವಲಾಹಿ ನಿರೂಪಿಸಿದರು.

Similar News