ಮಂಗಳೂರು: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ಕಾರ್ಯಾಗಾರ

Update: 2023-02-07 09:37 GMT

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇ ರಿ ಮಂಗಳೂರು ದಕ್ಷಿಣ ಇದರ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಉನ್ನತೀಕರಿಸುವ ಉದ್ದೇಶದಿಂದ ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ಮತ್ತು ಪ್ರೇರಣಾ ತರಗತಿ ಕಾರ್ಯಾಗಾರ ಕಪಿತಾನಿಯೋ ಅನುದಾನಿತ ಕನ್ನಡ ಮಾದ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.

ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಶಾಂತ್ ಮತ್ತು  ಕ್ಷೇತ್ರ ದೈಹಿಕ ಪರಿವೀಕ್ಷಣಾ ಅಧಿಕಾರಿ ರವಿಶಂಕರ್ ಸಾಂಧರ್ಬಿಕವಾಗಿ ಮಾತನಾಡಿದರು.

ಟ್ಯಾಲೆಂಟ್‌ ಸಂಸ್ಥೆಯ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಅಧ್ಯಕ್ಷತೆ ವಹಿಸಿದರು. ಕಪಿತಾನಿಯೋ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲೀನಾ ಡಿಸೋಜ ಉಪಸ್ಥಿತರಿದ್ದರು. ನಾಲ್ಯಪದವು ಪ್ರೌಢಶಾಲಾ ಇಂಗ್ಲಿಷ್ ಶಿಕ್ಷಕಿ ವಿಜಯಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ತರಗತಿಯನ್ನು ನಡೆಸಿದರು.

ಈ ಕಾರ್ಯಾಗಾರದಲ್ಲಿ ಕಪಿತಾನಿಯೋ ಪ್ರೌಢಶಾಲೆ, ಕಣ್ಣೂರು ಸರಕಾರಿ ಪ್ರೌಢಶಾಲೆ, ಸೈಂಟ್ ಜೋಸೆಫ್ ಪ್ರೌಢಶಾಲೆ ಪಕಲಡ್ಕ ಇದರ ಕಲಿಕೆಯಲ್ಲಿ ಹಿಂದುಳಿದ 60 ವಿದ್ಯಾರ್ಥಿಗಳು ಭಾಗವಹಿಸಿದರು. ಟ್ಯಾಲೆಂಟ್ ಸಂಸ್ಥೆಯ ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣ ಸಂಯೋಜಕಿ ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು.

Similar News