ಮಂಜನಾಡಿ-ಅನ್ಸಾರ್ ನಗರ ದಫ್ ಸ್ಪರ್ಧೆ: ಕೃಷ್ಣಾಪುರ ತಂಡಕ್ಕೆ ಪ್ರಶಸ್ತಿ

Update: 2023-02-07 10:41 GMT

ಬಂಟ್ವಾಳ, ಫೆ. 7: ಮಂಗಳೂರು ಕ್ಷೇತ್ರದಲ್ಲಿ ಈ ವರ್ಷದಿಂದಲೇ ದಫ್ ಸ್ಪರ್ಧಾ ಕಾರ್ಯಕ್ರಮ ಆರಂಭಿಸಿ ಅದನ್ನು ಪ್ರತಿ ವರ್ಷ ಮುಂದುವರಿಸುವ ಮೂಲಕ ನಿರಂತರ ಕಾರ್ಯಕ್ರಮವಾಗಿ ಆಯೋಜಿಸಲಾಗುವುದು ಎಂದು ಶಾಸಕ, ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದರು.

ಮಂಜನಾಡಿ-ಅನ್ಸಾರ್ ನಗರದಲ್ಲಿ ರಿಫಾಯಿಯ ಖಿದ್ಮತುಲ್ ಇಸ್ಲಾಂ ದಫ್ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಷೇತ್ರದ ಯಾವುದಾದರೂ ಭಾಗದಲ್ಲಿ ಸೂಕ್ತ ಸ್ಥಳ ಗುರುತಿಸಿ ಶೀಘ್ರದಲ್ಲಿ ಈ ವರ್ಷವೇ ಅದ್ದೂರಿ ದಫ್ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.

ಯುವ ಸಮೂಹವು ಸೌಹಾರ್ದತೆ, ಸಾಹೋದರ್ಯತೆ, ಭ್ರಾತೃತ್ವ ಸಾರುವ ದಫ್ ಕಲೆಯಂತಹ ಸಾಂಸ್ಕೃತಿಕ ಕಲೆಯತ್ತ ಹೆಚ್ಚು ಆಕರ್ಷಿತ ರಾಗುವಂತಾಗಬೇಕು. ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವಕರನ್ನು ಕೆಟ್ಟ ಚಟಗಳಿಗೆ ಬಲಿಯಾಗುವುದರಿಂದ ತಡೆಯುತ್ತದೆ, ಧಾರ್ಮಿಕ ನಾಯಕರ ಮುಂದಾಳುತ್ವ ಒಪ್ಪಿಕೊಂಡು ಸಮಾಜದಲ್ಲಿ ಸುಸಂಸ್ಕೃತ ಜೀವನ ನಡೆಸುವಂತಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಪಿ.ಎ.ಅಹ್ಮದ್ ಬಾಖವಿ, ಉಮರುಲ್ ಫಾರೂಕ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ, ಎಂ ಇ ಅಬ್ದುಲ್ ರಝಾಕ್ ಮದನಿ ಅಲ್-ಕಾಮಿಲ್, ಸೈಯದ್ ಮುಹಮ್ಮದ್ ಮೆಹರಾಜ್ ಅಲ್ ಹಾದಿ ಅಲ್ ಅಶ್ಹರಿ, ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಅಬ್ಬಾಸ್ ಸಖಾಫಿ, ಎಂ ಇ ಶಾಹುಲ್ ಹಮೀದ್ ಮದನಿ, ಮಂಜನಾಡಿ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ (ಮೈಸೂರು ಬಾವ), ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಮಂಜನಾಡಿ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಹಾಜಿ ಎನ್ ಎಸ್ ಕರೀಂ, ಮಂಗಳೂರು ತಾ ಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಮಾಜಿ ಸದಸ್ಯ ಎನ್ ಎಂ ಅಹ್ಮದ್ ಕುಂಞಿ, ಮುಹಮ್ಮದ್ ಯು.ಬಿ, ರಿಫಾಯಿಯಾ ಖಿದ್ಮತುಲ್ ಇಸ್ಲಾಂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫಾರೂಕ್ ಝಲ್ ಝಲ್, ಮಂಜನಾಡಿ ಗ್ರಾ ಪಂ ಸದಸ್ಯ ಇಲ್ಯಾಸ್ ಮೇಗಿನಮನೆ, ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಯು.ಎಸ್ ಮನ್ಸೂರ್, ಯು.ಎಸ್. ಆಸಿಫ್, ಶರೀಫ್, ರವೂಫ್, ಸವಾದ್ ಕೊಲ, ರಾಶೀದ್, ಶರೀಫ್ ಪುತ್ತೂರು, ಆಸಿಫ್ ಎಂ.ಎಚ್, ನೌಶಾದ್ ಕಲ್ಕಟ್ಟ, ಮೋನು ಕೊಳ, ಎಂ.ಬಿ. ಅಬ್ಬಾಸ್, ಎಂ.ಇ ಮೊಯಿದಿನ್ ಕುಂಞಿ, ಹನೀಫ್ ಸಫಾ, ಹನೀಫ್ ಕುಂಬ್ಲೆ, ಅಶ್ರಫ್ ಯು.ಬಿ ಮೊದಲಾದವರು ಭಾಗವಹಿಸಿದ್ದರು. ದಫ್ ಎಸೋಸಿಯೇಶನ್ ಸದಸ್ಯರಾದ ನೌಫಲ್ ಕುಡ್ತಮುಗೇರು ಹಾಗೂ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಆರ್ ಕೆ ಮದನಿ ಅಮ್ಮೆಂಬಳ, ಹಾರಿಸ್ ಮದನಿ ಪಾಟ್ರಕೋಡಿ, ಉಸ್ಮಾನ್ ಸಜಿಪನಡು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಕೃಷ್ಣಾಪುರ ತಂಡಕ್ಕೆ ದಫ್ ಪ್ರಶಸ್ತಿ: ದಫ್ ಸ್ಪರ್ಧಾ ಕೂಟದಲ್ಲಿ ಕೃಷ್ಣಾಪುರದ ಲಜ್ ನತುಲ್ ಅನ್ಸಾರಿಯಾ ದಫ್ ತಂಡ ಪ್ರಥಮ, ಉಳ್ಳಾಲ-ಅಳೇಕಲದ ಅನ್ನಜಾತ್ ದಫ್ ತಂಡ ದ್ವಿತೀಯ ಹಾಗೂ ಮಂಚಕಲ್-ಶಿರ್ವದ ಅಲ್-ಅಮೀನ್ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಕೃಷ್ಣಾಪುರ ದಫ್ ತಂಡ ಉತ್ತಮ ಹಾಡುಗಾರ ಪ್ರಶಸ್ತಿಯನ್ನು ಪಡೆದುಕೊಂಡಿತು.

Similar News