ಮಂಗಳೂರು: ಅದ್ವೈತ್ ಹ್ಯೂಂಡೈನಲ್ಲಿ ಅಯೋನಿಕ್ 5 ಅನಾವರಣ

Update: 2023-02-08 17:07 GMT

ಮಂಗಳೂರು: ಇತ್ತೀಚೆಗೆ ಮಂಗಳೂರಿನ ಅದ್ವೈತ್ ಹ್ಯೂಂಡೈ ಶೋರೂಂನಲ್ಲಿ ಐಷಾರಾಮಿ ಎಲೆಕ್ಟ್ರಿಕ್ ಕಾರು ಅಯೋನಿಕ್ 5ನ ಅನಾವರಣ ಸಮಾರಂಭ ನಡೆಯಿತು.

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಮೋಹನ್ ಆಳ್ವ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ಹೆಡ್ ಶಶಿಕಾಂತ್ ಶೆಟ್ಟಿ,ಬ್ರಾಂಚ್ ಸೇಲ್ಸ್ ಹೆಡ್ ಶಿವಪ್ರಸಾದ್, ಶೋರೂಂ ಮ್ಯಾನೇಜರ್ ರಾಜೇಶ್ ಉಳ್ಳಾಲ್, ಅಕೌಂಟ್ಸ್ ಮ್ಯಾನೇಜರ್ ಸುಧಾಕರ್, ಸೇಲ್ಸ್ ಮ್ಯಾನೇಜರ್ ಮೀನಾ ರೆಗೊ, ಹರ್ಷಾ ರಾಜ್ , ಪ್ರೀತಮ್ ಕುಮಾರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
 
ಅಯೋನಿಕ್ 5 ಹೂಂಡೈನ ಇಲೆಕ್ಟ್ರಿಕ್ -ಜಾಗತಿಕ ಮಾದರಿ ವೇದಿಕೆಯಲ್ಲಿ ನಿರ್ಮಾಣವಾಗಿದೆ. ಇದು ವಿನ್ಯಾಸ, ಸಾಮರ್ಥ್ಯ, ವಿಶ್ವಾಸಾರ್ಹತೆ ಮತ್ತು ಉಪಯುಕ್ತತೆಯ ಸಂಯೋಜನೆಯಾಗಿದೆ. ಇದು 2022ರಲ್ಲಿ ವಿಶ್ವ ಅತ್ಯುತ್ತಮ ಕಾರು ಪ್ರಶಸ್ತಿ,  ಕಾರು ವಿನ್ಯಾಸ ಪ್ರಶಸ್ತಿ, ವರ್ಷದ ಎಲೆಕ್ಟ್ರಿಕ್ ಕಾರು ಪ್ರಶಸ್ತಿ ಪಡೆದುಕೊಂಡಿದೆ.

ಇದು 350ಕಿವ್ಯಾ ಚಾರ್ಜರ್ ನಲ್ಲಿ 10-80% ಕೇವಲ 18 ನಿಮಿಷ ತೆಗೆದುಕೊಳ್ಳಲಿದೆ. ಎಆರ್‌ಎಐ ಮಾಹಿತಿ ಪ್ರಕಾರ ಪುಲ್ ಚಾರ್ಜ್ ಗೆ 631 ಕೀಮೀ ಚಲಿಸಲಿದೆ. ಇದು 0-100 ಕೀಮೀ ವೇಗವನ್ನು ಕೇವಲ 7.6 ಸೆಕೆಂಡ್ ನಲ್ಲಿ ಸಾಧಿಸಲಿದೆ.ಇದರ ಗರಿಷ್ಟ ಸಾಮರ್ಥ್ಯ 217ಪಿಎಸ್ ಮತ್ತು 350ಎನ್ ಎಮ್ ಟಾರ್ಕ್ ಹೊಂದಿದೆ.

ಇದರ ವಿನ್ಯಾಸವು ಪ್ರಕೃತಿಯಿಂದ ಪ್ರೇರಿತವಾಗಿದೆ. ಇದರ ಕ್ರಾಶ್ ಪ್ಯಾಡ್, ಡೊರ್ ಟ್ರಿಮ್ , ಕಾರ್ಪೆಟ್ ಗಳಲ್ಲಿ  ನೈಸರ್ಗಿಕ ಧಾತುಗಳನ್ನು ಸಂಸ್ಕರಿಸಿ ಬಳಸಲಾಗಿದೆ.ಇದರ ಆಸನಗಳಲ್ಲಿ ಬಾಟಲ್ ಗಳನ್ನು ಸಂಸ್ಕರಿಸಿ ಮಾಡಲಾದ ಫ್ಯಾಬ್ರಿಕ್ ಬಳಸಲಾಗಿದೆ.

ಆಯೋನಿಕ್ 5 ಯು ವಾಹನದಿಂದ ವಾಹನಕ್ಕೆ ಚಾರ್ಜ್ ಮಾಡುವ, ಮುಂಬದಿ  ಚಾಚಬಲ್ಲ ಸೀಟು, ಮೆಮೊರಿ ಸೀಟ್ ಸಂರಚನೆಯ, 21 ಸೌಲಭ್ಯಗಳ íBíT ತಂತ್ರಜ್ಞಾನ, ಬೊಸ್ ಆಡಿಯೋ ಸಿಸ್ಟಮ್, 12.3ಇಂಚ್ ಟಚ್ ಸ್ಕ್ರೀನ್, ಬ್ಲೂಲಿಂಕ್ ಸೇರಿದಂತೆ 62 ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಅಯೋನಿಕ್ 5  3ವರ್ಷ/ಅನಿಯಮಿತ ದೂರ, 8ವರ್ಷ/1,60,000ಕಿ.ಮಿಗಳ ಬ್ಯಾಟರಿ  ವಾರಂಟಿ ಯೊಂದಿಗೆ ಗ್ರಾಹಕರು  ಐಷಾರಾಮಿ ಸೌಲಭ್ಯಗಳನ್ನು ಅನುಭವಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Similar News