ಅಮಿತ್ ಶಾ ರೋಡ್ ಶೋ ಮಾಡುವ ಬದಲು ಜನರ ಸಮಸ್ಯೆಗೆ ಪರಿಹಾರ ನೀಡಲಿ: ಐವನ್ ಡಿಸೋಜಾ

Update: 2023-02-09 09:09 GMT

ಮಂಗಳೂರು, ಫೆ.9;ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಮಾಡುವ ಮೊದಲು ಜನರ ಸಮಸ್ಯೆ ಪರಿಹರಿಸಲು ಗಮನಹರಿಸಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದೇಶದ ನಿರುದ್ಯೋಗ, ಬಡತನ ಹಲವು ಸಮಸ್ಯೆ ಗಳಿಂದ ಜನ ತೊಂದರೆ ಗೀಡಾಗಿದ್ದಾರೆ. ಅದರ ಮೇಲೆ ಬೆಲೆ ಏರಿಕೆ ಗೃಹ ಸಾಲ ಪಡೆದವರ ಸಾಲದ ಮೇಲೆ ಬಡ್ಡಿ ದರದ ಹೆಚ್ಚಳ ಜನರ ಮೇಲೆ ಇನ್ನಷ್ಟು ಹೊರೆ ಬೀಳಲಿದೆ. ರಾಜ್ಯದ ಜಿಎಸ್ ಟಿ ಪಾಲು ಇನ್ನೂ ದೊರೆತ್ತಿಲ್ಲ. ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರದ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರೋಡ್ ಶೋ ಮಾಡುವ ಬದಲು ಸಮಸ್ಯೆ ಪರಿಹಾರದ ಬಗ್ಗೆ ಗಮನ ಹರಿಸುವಂತಾಗಲಿ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ  ಬರಲಿದೆ. ಈ ಸೂಚನೆ ದೊರೆತ ಹಿನ್ನಲೆಯಲ್ಲಿ ಬಿಜೆಪಿ ಪ್ರಧಾನಿ ಮೋದಿಯವರನ್ನು ಮತ್ತೆ ರಾಜ್ಯ ಕ್ಕೆ ಆಹ್ವಾನಿಸಿ ಸರಕಾರಿ ವೆಚ್ಚದಲ್ಲಿ  ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಐವನ್ ಡಿಸೋಜಾ ಟೀಕಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ  ಮಾಜಿ ಮೇಯರ್  ಶಶಿಧರ ಹೆಗ್ಡೆ, ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದನಾಯಕ ನವೀನ್ ಡಿಸೋಜಾ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಪ್ರಕಾಶ್ ಬಿ ಸಾಲಿಯನ್ ಮಾಜಿ ಕಾರ್ಪೊರೇಟರ್ ಅಪ್ಪಿ,ಭಾಸ್ಕರ್ ರಾವ್, ಸಬಿತಾ ಮಿಸ್ಕಿತ್, ಮೀನಾ ಟೆಲ್ಲಿಸ್, ರಮಾನಂದ ಪೂಜಾರಿ, ಫಯಾಜ್ ಅಮೆಮಾರ್, ಹಬೀಬುಲ್  ಕಣ್ಣೂರು, ಅಲೆಸ್ಟ್ ರ್ ಡಿಕ್ಕುನ್ನ, ನಜೀರ್ ಬಜಾಲ್  ಮೊದಲಾದವರು ಉಪಸ್ಥಿತರಿದ್ದರು.

Similar News