×
Ad

ವಿಧಾನಸೌಧದಲ್ಲಿ 2 ವರ್ಷದಿಂದ ಕೆಲಸ ಮಾಡದ ಸ್ಕ್ಯಾನಿಂಗ್ ಯಂತ್ರಗಳು: ಸರ್ಕಾರ ಮೇಲೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್

Update: 2023-02-09 15:42 IST

ಬೆಂಗಳೂರು: ವಿಧಾನಸೌಧದೊಳಗೆ ಪ್ರವೇಶಿಸುವ ವೇಳೆ ಬ್ಯಾಗ್‌ಗಳನ್ನು ಸ್ಕ್ಯಾನಿಂಗ್ ಮಾಡುವ ಯಂತ್ರಗಳು ಕೆಲಸ ಮಾಡುತ್ತಿಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ @INCKarnataka ಆರೋಪಿಸಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ , 'ವಿಧಾನಸೌಧ ಸರ್ಕಾರವೇ ಕೆಲಸ ಮಾಡುತ್ತಿಲ್ಲ, ಇನ್ನು ಸ್ಕ್ಯಾನಿಂಗ್ ಯಂತ್ರಗಳು ಕೆಲಸ ಮಾಡುತ್ತವೆಯೇ!?' ಎಂದು ವ್ಯಂಗ್ಯವಾಡಿದೆ. 

''ವ್ಯಾಪಾರಸೌಧದಲ್ಲಿ ನಡೆಯುವ ಅವ್ಯವಹಾರ ಸುಗಮವಾಗಲಿ ಎಂದು ಸ್ಕ್ಯಾನಿಂಗ್ ಯಂತ್ರಗಳನ್ನು ಹಾಳುಗೆಡವಲಾಗಿದೆಯೇ? ಇತ್ತೀಚಿಗೆ ವಿಧಾನಸೌಧದಲ್ಲಿ ಸಿಕ್ಕಿಬಿದ್ದ 10 ಲಕ್ಷ ಹಣ ಈ ಅವ್ಯವಹಾರಕ್ಕೆ ಪುಷ್ಠಿ ಕೂಡುತ್ತದೆ'' ಎಂದು ಶಂಕೆ ವ್ಯಕ್ತಪಡಿಸಿದೆ.

ಇತ್ತೀಚೆಗೆ ವಿಧಾನಸೌಧದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ನಿಂದ 10.5 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. 

Similar News