ಮತದಾರರಿಗೆ ಆಮಿಷ: ರಾಜಕಾರಣಿಗಳ ವಿರುದ್ಧ ಕ್ರಮಕ್ಕೆ KRS ಪಕ್ಷ ಒತ್ತಾಯ
Update: 2023-02-10 22:19 IST
ಬೆಂಗಳೂರು, ಫೆ.10: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಚುನಾವಣಾ ಆಯೋಗಕ್ಕೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದಿದೆ.
ರಾಜಕೀಯ ಮುಖಂಡರು ಮತದಾರರಿಗೆ ತೀರ್ಥಕ್ಷೇತ್ರದ ಪ್ರವಾಸಗಳನ್ನು ಪ್ರಾಯೋಜಿಸುತ್ತಿದ್ದಾರೆ. ಬಿರಿಯಾನಿ ಪಾರ್ಟಿ ಆಯೋಜಿಸಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಪಕಟವಾಗುತ್ತಿವೆ. ಆದರೆ ಆಯೋಗವು ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.
ಸರಕಾರಿ ನೌಕರರ ಯಾವ ನೇಮಕಾತಿಯು ಅಕ್ರಮಗಳಿಂದ ಮುಕ್ತವಾಗಿಲ್ಲ. ಕಮಿಷನ್ ಪದ್ಧತಿಯ ಕಾರಣ ಎಲ್ಲ ಕಾಮಗಾರಿಗಳ ಗುಣಮಟ್ಟ ಕಳಪೆ ಮತ್ತು ಇರುವ ಯುಕ್ತ ಅದರಿಂದ ಜನಸಾಮಾನ್ಯರ ತೆರಿಗೆ ಹಣ ಪೋಲಾಗುತ್ತಿದೆ ಎಂದು ತಿಳಿಸಿದೆ.