×
Ad

​ಹಜ್ ಯಾತ್ರೆ: ಅರ್ಜಿ ಸಲ್ಲಿಕೆಗೆ ಪೂರಕ ನೆರವು

Update: 2023-02-11 16:41 IST

ಮಂಗಳೂರು: ಪ್ರಸಕ್ತ ಸಾಲಿನ (2023) ಹಜ್ ಯಾತ್ರಿಕರ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ನಗರದ ಬಂದರ್‌ನಲ್ಲಿರುವ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಚೇರಿಯಲ್ಲಿ ಪೂರಕ ನೆರವು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಆಗಮಿಸುವ ವೇಳೆ ಪಾಸ್‌ಪೋರ್ಟ್ ಹಾಗೂ ಅದರ 2 ಪ್ರತಿ, ಪಾಸ್‌ಪೋರ್ಟ್ ಸೈಝ್‌ನ 2 ಟೋ (ಸ್ಕ್ರೀನ್ ವೈಟ್), ಆರ್ ಕಾರ್ಡ್, ಪಾನ್‌ಕಾರ್ಡ್, ಕೋವಿಡ್ ಲಸಿಕೆ ಹಾಕಿಸಿದ ಪ್ರಮಾಣಪತ್ರ, ಬ್ಯಾಂಕ್ ಚೆಕ್ ಅಥವಾ ಪಾಸ್‌ಪುಸ್ತಕದ ಪ್ರತಿ, ರಕ್ತದ ಗುಂಪಿನ ಪ್ರತಿಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂ: 9141941415, 7019079044, 9916647651ನ್ನು ಸಂಪರ್ಕಿಬಹುದು ಎಂದು ಪ್ರಕಟನೆ ತಿಳಿಸಿದೆ.

Similar News