ಬೆಂಗಳೂರು | ಪ್ರತ್ಯೇಕ ಪ್ರಕರಣ: ಇಬ್ಬರ ಹತ್ಯೆ
ಬೆಂಗಳೂರು, ಫೆ.11: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಕೊಲೆಯಾಗಿರುವ ಘಟನೆಗಳು ವರದಿಯಾಗಿವೆ.
ನಿನ್ನೆ ರಾತ್ರಿ ಇಲ್ಲಿನ ವರ್ತೂರು ಬಳಿಯ ಹಲಸಹಳ್ಳಿ ಮುಖ್ಯ ರಸ್ತೆಯಲ್ಲಿರುವ ಮದ್ಯದಂಗಡಿ ಬಳಿ ಮದ್ಯ ಸೇವಿಸಿದ ಅಮಲಿನಲ್ಲಿ ಶ್ರೀಧರ್‍ಮತ್ತು ಮುನಿಯಪ್ಪ ಎಂಬವರು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ಕೋಪಗೊಂಡ ಶ್ರೀಧರ್, ಮುನಿಯಪ್ಪ(45) ನನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಶ್ರೀಧರ್‍ನನ್ನು ಬಂಧಿಸಿರುವ ವರ್ತೂರು ಠಾಣಾ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಸ್ನೇಹಿತನ ಕೊಲೆ: ಮತ್ತೊಂದು ಕೊಲೆ ಪ್ರಕರಣವು ಶುಕ್ರವಾರ ತಡರಾತ್ರಿ ಕೋಣನಕುಂಟೆ ಬಳಿ ನಡೆದಿದೆ. ಹಳೇ ವೈಷಮ್ಯಕ್ಕೆ ಸ್ನೇಹಿತನನ್ನೆ ಚಾಕುವಿನಿಂದ ಇರಿದು ಸ್ನೇಹಿತನೆ ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಶರತ್ ಕುಮಾರ್ (25) ಕೊಲೆಯಾದ ಯುವಕನಾಗಿದ್ದು, ಲೋಕೇಶ್ ಹತ್ಯೆಗೈದ ಆರೋಪಿ ಎನ್ನಲಾಗಿದೆ.
ಸ್ನೇಹಿತರಾಗಿದ್ದ ಶರತ್ ಕುಮಾರ್ ಮತ್ತು ಲೋಕೇಶ್ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ ಬೇರೆಯಾಗಿದ್ದರು. ತಡರಾತ್ರಿ ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿದೆ. ಈ ವೇಳೆ ಕೋಪಗೊಂಡ ಶರತ್ ಕುಮಾರ್, ಲೋಕೇಶ್‍ಗೆ ಚಾಕು ಇರಿಯಲುಮುಂದಾಗಿದ್ದಾನೆ. ಇದನ್ನು ತಪ್ಪಿಸಲು ಪ್ರಯತ್ನಿಸಿದ ಲೋಕೇಶ್, ಶರತ್ ಕೈಯಿಂದ ಚಾಕು ಕಸಿದುಕೊಂಡು ಆತನಿಗೆಯೇ ಇರಿದಿದ್ದಾನೆ. ಪರಿಣಾಮಶರತ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.