×
Ad

ಬೆಂಗಳೂರು: ಬಿಜೆಪಿ ಜಾಹೀರಾತು ಫಲಕಗಳಿಗೆ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು

Update: 2023-02-11 17:46 IST

ಬೆಂಗಳೂರು, ಫೆ.11: ರಾಜ್ಯ ಬಿಜೆಪಿ ಸರಕಾರ ಸುಳ್ಳು ಮಾಹಿತಿಯುಳ್ಳ ಭಿತ್ತಿ ಪತ್ರಗಳನ್ನು ರಸ್ತೆಬದಿ ಅಂಟಿಸಿ, ನಗರದ ಸೌಂದರ್ಯವನ್ನೆ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ಜಾಹೀರಾತು ಫಲಕಗಳಿಗೆ ಮಸಿ ಬಳಿದು ಆಕ್ರೋಶ ಹೊರಹಾಕಿದರು.

ಶನಿವಾರ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭಿತ್ತಿಪತ್ರಗಳ ಮೇಲೆ ಕಾಂಗ್ರೆಸ್ ನಾಯಕ ಮನೋಹರ್ ನೇತೃತ್ವದಲ್ಲಿ ಮಸಿ ಬಳಿದು ಕಿಡಿಕಾರಿದರು. 

ಈ ವೇಳೆ ಪ್ರತಿಕ್ರಿಯಿಸಿದ ಮನೋಹರ್, ಬಿಜೆಪಿ ಪಕ್ಷದ ನಾಯಕರು ಬೆಂಗಳೂರು ನಗರದ ಸೌಂದರ್ಯವನ್ನು ಹಾಳು ಮಾಡಿ ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ಬಿಜೆಪಿ ಭರವಸೆಗಳು ಎಂದು ಪ್ರಚಾರ ಪಡೆಯುತ್ತಿದೆ.ಆದರೆ, ಇದರ ವಿರುದ್ಧ ನಾವು ಹೋರಾಟ ಪ್ರಾರಂಭಿಸಿದ್ದೇವೆ ಎಂದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭಿತ್ತಿ ಪತ್ರಗಳ ಮೇಲೆ ಬಿಜೆಪಿಯ ಶೇ.40 ಕಮಿಷನ್ ವಿಷಯ ಬರೆಯುವದರ ಮೂಲಕ ಬಿಜೆಪಿಯ ದುರಾಡಳಿತವನ್ನು ಖಂಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

Similar News