ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ತುಳು ಭಾಷಣದಲ್ಲಿ ರಶ್ಮಿತಾ ಪ್ರಥಮ
Update: 2023-02-14 20:10 IST
ಉಡುಪಿ: ಕರ್ನಾಟಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆಸಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ತುಳು ಭಾಷಣ ಸ್ಪರ್ಧೆಯಲ್ಲಿ ಉಡುಪಿಯ ರಶ್ಮಿತಾ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ.
ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ರಶ್ಮಿತಾ ಪ್ರಥಮ ಸ್ಥಾನ ಪಡೆಯುವ ಮೂಲಕ ನಾಲ್ಕು ಸಾವಿರ ರೂ.ಗಳ ನಗದು ಮತ್ತು ಶಾಶ್ವತ ಫಲಕವನ್ನು ತನ್ನದಾಗಿಸಿ ಕೊಂಡಿದ್ದಾಳೆ. ಇವಳು ಕಾಪು ಚಂದ್ರನಗರ ನಿವಾಸಿ ಕಾಂತಿ ರಮೇಶ ಮೂಲ್ಯ ದಂಪತಿಗಳ ಪುತ್ರಿ.