ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ: ನಿಕ್ಕಿ ಹ್ಯಾಲೆ ಘೋಷಣೆ

Update: 2023-02-14 17:59 GMT

ವಾಶಿಂಗ್ಟನ್, ಫೆ.14:  ಭಾರತೀಯ ಮೂಲದ ಅಮೆರಿಕನ್ ರಾಜಕಾರಣಿ, ರಿಪಬ್ಲಿಕನ್ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಾಕಾಂಕ್ಷಿಯಾಗುವ ತನ್ನ ನಿರ್ಧಾರವನ್ನು ಸೋಮವಾರ ಘೋಷಿಸಿದ್ದಾರೆ. ಬುಧವಾರದಿಂದ ಪ್ರಚಾರ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ಭಾರತೀಯ ಮೂಲದ ವಲಸಿಗ ದಂಪತಿಯ ಪುತ್ರಿಯಾದ 51 ವರ್ಷದ ನಿಕ್ಕಿ ಹ್ಯಾಲೆ ಅವರು ದಕ್ಷಿಣ ಕರೋಲಿನಾದ ಗವರ್ನರ್ ಆಗಿದ್ದಾರೆ.

‘‘ಆರ್ಥಿಕ ಹೊಣೆಗಾರಿಕೆಯನ್ನು ಮರುಶೋಧಿಸಲು, ನಮ್ಮ ಗಡಿಯನ್ನು ಭದ್ರಪಡಿಸಲು, ನಮ್ಮ ದೇಶವನ್ನು,ನಮ್ಮ ಹೆಮ್ಮೆ ಹಾಗೂ  ಯೋಜಿತ ಗುರಿಯನ್ನು ಬಲಪಡಿಸಲು ಹೊಸ ತಲೆಮಾರಿಗೆ ನಾಯಕತ್ವ ವಹಿಸುವುದಕ್ಕೆ ಇದು ಸಕಾಲವಾಗಿದೆ’’ ಎಂದು ನಿಕಿ ಹ್ಯಾಲೆ ಅವರು ವಿಡಿಯೋ ಮೂಲಕ ಪ್ರಕಟಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಈಗಾಗಲೇ ನಿಕ್ಕಿ ಹ್ಯಾಲೆ ಅಮೆರಿಕದ ಅಧ್ಯಕ್ಷೀಯ ಹುದ್ದೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿರುವ  ಡೊನಾಲ್ಡ್ ಟ್ರಂಪ್‌ ವಿರುದ್ಧ ಸ್ಫರ್ಧೆಯನ್ನು ಘೋಷಿಸಿದ ಪ್ರಥಮ ಸ್ಪರ್ಧಿಯೆನಿಸಿಕೊಂಡಿದ್ದಾರೆ.

Similar News