×
Ad

ಭಾರತದ ಮೇಲೆ ಟ್ರಂಪ್ ವಿಧಿಸಿದ ಶೇಕಡ 50ರ ಸುಂಕ ಕೊನೆಗೊಳಿಸುವ ನಿರ್ಣಯ ಮಂಡಿಸಿದ ಅಮೆರಿಕ ಸಂಸದರು

Update: 2025-12-13 08:47 IST

ಡೊನಾಲ್ಡ್ ಟ್ರಂಪ್ | Photo : PTI

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸುವ ನಿರ್ಣಯವನ್ನು ಅಮೆರಿಕದ ಪ್ರತಿನಿಧಿ ಸಭೆಯ ಮೂವರು ಸದಸ್ಯರು ಶುಕ್ರವಾರ ಸದನದಲ್ಲಿ ಮಂಡಿಸಿದ್ದಾರೆ. ರಾಷ್ಟ್ರೀಯ ತುರ್ತು ಸ್ಥಿತಿಯ ನೆಪದಲ್ಲಿ ಟ್ರಂಪ್ ಭಾರತದಿಂದ ಆಮದಾಗುವ ಸರಕು ಮತ್ತು ಸೇವೆಗಳ ಮೇಲೆ ಶೇ.50ರ ಸುಂಕ ವಿಧಿಸಿದ್ದರು.

ಟ್ರಂಪ್ ಘೋಷಿಸಿದ ಈ ಕ್ರಮಗಳು ಕಾನೂನುಬಾಹಿರ ಮತ್ತು ಅಮೆರಿಕದ ಉದ್ಯೋಗಿಗಳು, ಗ್ರಾಹಕರು ಮತ್ತು ದ್ವಿಪಕ್ಷೀಯ ಸಂಬಂದಕ್ಕೆ ಮಾರಕ ಎಂದು ನಿರ್ಣಯ ಮಂಡಿಸಿದ ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ ಸದಸ್ಯರಾದ ದೆಬ್ರೋ ರಾಸ್, ಮಾರ್ಕ್ ವಿಯಾಸೆ ಮತ್ತು ರಾಜಾ ಕೃಷ್ಣಮೂರ್ತಿ ಈ ನಿರ್ಣಯ ಮಂಡಿಸಿದ್ದಾರೆ. ಬ್ರೆಜಿಲ್ ನ ಮೇಲೆ ವಿಧಿಸಿದ್ದ ಇಂಥದ್ದೇ ಸುಂಕವನ್ನು ಕೊನೆಗೊಳಿಸಲು ದ್ವಿಪಕ್ಷೀಯ ಸೆನೆಟ್ ಕೈಗೊಂಡ ಕ್ರಮದ ಬಳಿಕ ಈ ನಿರ್ಣಯ ಮಂಡಿಸಲಾಗಿದ್ದು, ಆಮದು ಸುಂಕವನ್ನು ಹೇರಲು ಅಧ್ಯಕ್ಷರ ತುರ್ತು ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದೆ.

ಭಾರತದ ಮೇಲೆ 2025ರ ಆನ27ರಂದು ಹೇರಲಾದ ಶೇನ25ರ ಹೆಚ್ಚುವರಿ ಪೂರಕ ಸುಂಕವನ್ನು ರದ್ದುಪಡಿಸಲು ಕೋರಿದೆ. ಇದಕ್ಕೂ ಮುನ್ನ ಪ್ರತ್ಯುತ್ತರ ಸುಂಕವನ್ನು ಹೇರಲಾಗಿತ್ತು. ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯಡಿ ವಿಧಿಸಿದ ಈ ಎರಡೂ ಸುಂಕಗಳು ಸೇರಿ ಭಾರತದಿಂದ ಆಮದಾಗುವ ಉತ್ಪನ್ನಗಳು ಶೇನ50ರಷ್ಟು ದುಬಾರಿಯಾಗಿದ್ದವು.

ನಾರ್ತ್ ಕರೋಲಿನಾ ಆರ್ಥಿಕತೆ ಭಾರತದ ವ್ಯಾಪಾರ, ಹೂಡಿಕೆ ಮತ್ತು ಹೆಚ್ಚಾಗಿರುವ ಭಾರತೀಯ ಅಮೆರಿಕನ್ ಸಮುದಾಯದ ಜತೆ ಆಳವಾದ ಸಂಬಂಧವನ್ನು ಹೊಂದಿದೆ ಎಂದು ರಾಸ್ ಹೇಳಿದರು. ಭಾರತವು ಮಹತ್ವದ ಸಾಂಸ್ಕೃತಿಕ, ಆರ್ಥಿಕ ಮತ್ತು ಪ್ರಮುಖ ಪಾಲುದಾರ. ಈ ಕಾನೂನುಬಾಹಿರ ಸುಂಕಗಳು ಈಗಾಗಲೇ ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ ಹೆಣಗಾಡುತ್ತಿರುವ ಉತ್ತರ ಟೆಕ್ಸಸ್ ನ ಜನರ ಪಾಲಿಗೆ ತೆರಿಗೆ ಹೊರೆಯಾಗಲಿದೆ ಎಂದು ವೆಸ್ಸಿ ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News